Connect with us

Hi, what are you looking for?

Diksoochi News

ಸಿನಿಮಾ

ಚಂದನವನದ ಹಿರಿಯ ನಟ ಉದಯ್ ಹುತ್ತಿನಗದ್ದೆ ನಿಧನ

1

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಉದಯ್ ಹುತ್ತಿನಗದ್ದೆ ವಿಧಿವಶರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಉಸಿರಾಟದ ಸಮಸ್ಯೆಯಿಂದ ಗುರುವಾರ ಸಂಜೆ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ಡಾ.ರಾಜ್‌ಕುಮಾರ್ ಅವರು ಅಭಿನಯಿಸಿದ್ದ ‘ದೇವತಾ ಮನುಷ್ಯ’ ಚಿತ್ರದಲ್ಲಿ ಸುಧಾರಾಣಿ ಅವರ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದ್ದರು.

Advertisement. Scroll to continue reading.

1987 ರಲ್ಲಿ ಬಿಡುಗಡೆಯಾದ ಆರಂಭ ಸಿನಿಮಾದ ಮೂಲಕ ನಾಯಕನಾಗಿ ಕನ್ನಡ ಚಿತ್ರ ರಂಗಕ್ಕೆ ಅವರು ಪದಾರ್ಪಣೆ ಮಾಡಿದ್ದರು.

ಶಿವಯೋಗಿ ಅಕ್ಕಮಹಾದೇವಿ, ಅಮೃತ ಬಿಂದು, ಉದ್ಭವ, ಅಗ್ನಿ ಪರ್ವ, ಶುಭಮಿಲನ, ಜಯಭೇರಿ, ಉದ್ಭವ, ಕ್ರಮ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಉಂಡು ಹೋದ ಕೊಂಡೂ ಹೋದ ಸೇರಿದಂತೆ ಹಲವು ಚಿತ್ರಗಳಲ್ಲಿ ಪಾತ್ರವಾಗಿದ್ದರು. ಬಳಿಕ ಅವರು ನಟನೆಯಿಂದ ದೂರ ಉಳಿದಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!