Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಅಂತರ್‌‌‌ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ

0

ವರದಿ : ಬಿ.ಎಸ್.ಆಚಾರ್ಯ

ಉಡುಪಿ : ಜಿಲ್ಲೆಯ ಕಡೆಗಳಲ್ಲಿ ದ್ವಿಚಕ್ರ ವಾಹನ ಕಳವುಗೈಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಯಚೂರು ಮೂಲದ ಸೊಮಶೇಖರ(21), ಬಾಗಲಕೋಟೆಯ ಶಂಕರ(21) ಬಂಧಿತರು.

Advertisement. Scroll to continue reading.

ಇವರಿಬ್ಬರು ಕಳೆದ 3 ವರ್ಷಗಳಿಂದ ಉಡುಪಿ, ದಾವಣಗೆರೆ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಕೋಟ ಪೊಲೀಸರ ವಿಶೇಷ ತಂಡವು ಒಟ್ಟು 12 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಭೇದಿಸಿದ್ದಾರೆ.

ಅದರಲ್ಲಿ ಉಡುಪಿ ನಗರ ಠಾಣೆಯ - 7, ಬ್ರಹ್ಮಾವರ ಠಾಣೆಯ – 1, ಶಂಕರಾನಾರಾಯಣ ಠಾಣೆಯ – 1, ಶೃಂಗೇರಿ ಠಾಣೆಯ- 1, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ -1 ಮತ್ತು ದಾವಣಗೆರೆ ಠಾಣೆಯ -1 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದುಬಂದಿರುತ್ತದೆ. ಇವುಗಳಲ್ಲಿ 3 ಪಲ್ಸರ್‌‌‌‌‌‌‌‌ ಬೈಕ್‌‌‌‌, 5 ಸ್ಪ್ಲೆಂಡರ್‌‌‌‌‌‌ ಬೈಕ್‌‌‌‌ ಮತ್ತು 1 ಹೀರೋ ಹೆಚ್‌‌‌‌.ಎಫ್‌‌‌‌. ಡಿಲಕ್ಸ್‌‌‌‌ ಬೈಕ್‌‌‌‌‌ ಒಳಗೊಂಡಂತೆ ಒಟ್ಟು 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ಅಂದಾಜು -450000 /- ರೂಪಾಯಿ ಆಗಿದೆ.

ಜಿಲ್ಲೆಯ ವಿವಿಧ ಕಡೆಗಳಲ್ಲಿನ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ನಿರ್ದೇಶನದಂತೆ ವಾಹನ ತಪಾಸಣೆ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಬ್ರಹ್ಮಾವರ ಪೊಲೀಸ್‌‌‌‌ ವೃತ್ತ ನಿರೀಕ್ಷಕ ಅನಂತ ಪದ್ಮನಾಭರವರ ನೇತೃತ್ವದ ವಿಶೇಷ ತಂಡದವರಾದ ಕೋಟ ಠಾಣಾ ಪಿ.ಎಸ್‌‌‌‌‌‌.ಐ.ಮಧು, ಪ್ರೊ. ಪಿ.ಎಸ್‌‌‌‌.ಐ. ಮಹಾಂತೇಶ್‌‌‌‌, ಪ್ರೊ. ಪಿ.ಎಸ್‌‌‌‌.ಐ ಪುನೀತ್‌‌‌‌‌‌, ಎ.ಎಸ್‌‌‌‌‌‌‌.ಐ. ಬಿ.ರವಿ ಕುಮಾರ್‌‌‌, ಸಿಬ್ಬಂದಿಯವರಾದ ರಾಘವೇಂದ್ರ, ಪ್ರಸನ್ನ, ರಾಜೇಶ್‌ರವರನ್ನು ಒಳಗೊಂಡ ತಂಡವು ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿರುವ ಸಮಯದಲ್ಲಿ ಗುರುವಾರ ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್‌‌‌‌‌‌ ಬಳಿ ನಂಬ್ರ ಪ್ಲೇಟ್‌‌‌‌‌‌‌ ಇಲ್ಲದ ಸ್ಪ್ಲೆಂಡರ್‌‌‌‌ ‌‌‌‌‌‌‌‌‌‌‌ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ವಾಹನದ ಬಳಿ ಇದ್ದ ಇಬ್ಬರನ್ನು ಸದ್ರಿ ವಾಹನದ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದೆ ಇದ್ದು, ಸದ್ರಿ ವಾಹನವು ಕಳ್ಳತನ ಮಾಡಿದ ಬೈಕ್‌‌‌‌‌‌‌‌ ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ. ಅವರುಗಳ ವಿರುದ್ಧ ಕೋಟ ಪೊಲೀಸ್‌‌‌‌‌‌‌ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್,ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಶ್ರೀ ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ, ಕೋಟ ಠಾಣೆಯ ಪಿ.ಎಸ್.ಐ ಶ್ರೀ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್‌‌‌‌‌‌.ಐ ಪುಷ್ಪಾ, ಪ್ರೊ. ಪಿ.ಎಸ್‌‌‌‌.ಐ. ಮಹಾಂತೇಶ್‌‌‌‌‌‌, ಪ್ರೊ. ಪಿ.ಎಸ್‌‌‌‌‌.ಐ ಪುನೀತ್‌‌‌, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ, ಕೋಟ ಠಾಣಾ ಎ.ಎಸ್‌‌‌‌.ಐ. ರವಿ ಕುಮಾರ್‌‌‌, ಸಿಬ್ಬಂದಿಯವರಾದ ರಾಘವೇಂದ್ರ, ಪ್ರಸನ್ನ, ರಾಜೇಶ್‌, ಕೃಷ್ಣ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ್ ನಾಯಕ, ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿಗಳಾದ ಸತೀಶ್, ಸಂತೋಷ ರಾಥೋಡ್, ಕಿರಣ, ಹನುಮಂತ, ಜಿಲ್ಲಾಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ ರವರುಗಳು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!