Connect with us

Hi, what are you looking for?

Diksoochi News

ಸಿನಿಮಾ

ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವವಾಗಿ ಪತ್ತೆ!

2

ಹೈದರಾಬಾದ್: ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ತೆಲಂಗಾಣದ ಬಂಜಾರಾ ಹಿಲ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದ ಗರಿಮೆಳ್ಳ ಪ್ರತ್ಯೂಷಾ ಹೈದರಾಬಾದ್ ನಲ್ಲಿ ವೃತ್ತಿ ಆರಂಭಿಸಿದ್ದರು. 2013 ರಲ್ಲಿ ಪ್ರತ್ಯುಷಾ ಗರಿಮೆಲ್ಲ ಎಂಬ ಹೆಸರಿನ ತನ್ನದೇ ಲೇಬಲ್‌ನ ಸಂಸ್ಥಾಪಕಿಯಾಗಿದ್ದ ಪ್ರತ್ಯುಷಾ, ಬಂಜಾರಾ ಹಿಲ್ಸ್‌ನಲ್ಲಿ ಫ್ಯಾಶನ್ ಸ್ಟುಡಿಯೋವನ್ನು ನಡೆಸುತ್ತಿದ್ದರು. ಟಾಲಿವುಡ್, ಬಾಲಿವುಡ್ ಮತ್ತು ಇತರ ಕ್ಷೇತ್ರಗಳ ಟಾಪ್ ಕ್ಲೈಂಟ್‌ಗಳನ್ನು ಹೊಂದಿದ್ದರು.

ಆಕೆ ಸ್ನಾನಗೃಹದಲ್ಲಿ ಬಿದ್ದಿರುವುದು ಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಪಿಎಂಇಗಾಗಿ ರವಾನಿಸಲಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Advertisement. Scroll to continue reading.

ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಜಾರ ಹಿಲ್ಸ್‌ನಲ್ಲಿ ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!