Connect with us

Hi, what are you looking for?

Diksoochi News

ರಾಷ್ಟ್ರೀಯ

ತೈಲ ತುಂಬಿದ ಟ್ಯಾಂಕರ್ ಸ್ಫೋಟ; ನಾಲ್ವರು ಸಜೀವ ದಹನ

1

ಒಡಿಶಾ : ತೈಲ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಜೀವ ದಹನಗೊಂಡಿರುವ ಘಟನೆ ನಯಾಗರ್ ಪ್ರದೇಶದಲ್ಲಿ ನಡೆದಿದೆ.

ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಎರಡು ಟ್ರಕ್‌ಗಳು ಡೀಸೆಲ್ ಮತ್ತು ಪೆಟ್ರೋಲ್ ತುಂಬಿಕೊಂಡು ಪರದೀಪ್‌ನಿಂದ ನಯಾಗಢಕ್ಕೆ ತೆರಳುತ್ತಿತ್ತು. ಈ ವೇಳೆ ಕುಸುಮಿ ನದಿಯಲ್ಲಿ ಒಂದು ಟ್ರಕ್ ಮಗುಚಿ ಬಿದ್ದಿತ್ತು ಎನ್ನಲಾಗಿದೆ.

ಸಾವನ್ನಪ್ಪಿದ ನಾಲ್ವರನ್ನು ಹೊರತುಪಡಿಸಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಘಟನೆಯ ಕುರಿತು ಎಸ್ಪಿ ಅಲೇಖಾ ಚಂದ್ರ ಪಾಹಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement. Scroll to continue reading.

ಎರಡನೇ ಟ್ಯಾಂಕರ್‌ನ ಸಿಬ್ಬಂದಿ ಮೊದಲ ಟ್ಯಾಂಕರ್‌ನ ಸಿಬ್ಬಂದಿಯನ್ನು ರಕ್ಷಿಸಲು ತೆರಳಿದ್ದರು. ಆ ವೇಳೆ ಹಠಾತ್ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಜೀವ ದಹನಗೊಂಡಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಎಸ್ಪಿ ಅಲೇಖಾ ಚಂದ್ರ ಪಾಹಿ ಮಾಹಿತಿ ನೀಡಿರುವ ಬಗ್ಗೆ ಎ ಎನ್ ಐ ವರದಿ ಮಾಡಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!