ರೈಸನ್: 35 ಅಡಿ ಆಳದ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಗೂರ್ಖಾ ಗ್ರಾಮದಲ್ಲಿ ನಡೆದಿದೆ.
12 ರಿಂದ 16 ವರ್ಷದೊಳಗಿನ ಮೂವರು ಬಾಲಕರು ಸ್ನಾನಕ್ಕೆಂದು ಭಾನುವಾರ ಮಧ್ಯಾಹ್ನ ಬಾವಿಗೆ ಇಳಿದಿದ್ದಾರೆ. ಸಂಜೆಯಾದರೂ ಅವರು ತಮ್ಮ ಮನೆಗಳಿಗೆ ಹೋಗದೇ ಇದ್ದ ಕಾರಣ ಗಾಬರಿಗೊಂಡ ಅವರ ಮನೆಯವರು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಬಾವಿಯ ಬಳಿ ಅವರ ಚಪ್ಪಲಿಗಳು, ಬಟ್ಟೆಗಳು ಪತ್ತೆಯಾಗಿವೆ.
Advertisement. Scroll to continue reading.
ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾವಿಯಿಂದ ಶವಗಳನ್ನು ಹೊರತೆಗೆದಿದ್ದಾರೆ.