ದಾವಣಗೆರೆ : ಮಹಿಳೆಯೊಬ್ಬರು 10 ತಿಂಗಳ ಹಸುಗೂಸಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಸಿವಿಲ್ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ಲಿಖಿತಾ (25) ಆತ್ಮಹತ್ಯೆ ಮಾಡಿಕೊಂಡವರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ 10 ತಿಂಗಳ ಮಗು ಅನ್ವಿತ್ ನನ್ನು ನೇಣುಹಾಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಅದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement. Scroll to continue reading.

ಲಿಖಿತಾ ಪೋಷಕರು ಮನೋಜ್ ಕುಮಾರ್ ಲಿಖಿತಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಆತನ ವರ್ತನೆ ಮತ್ತು ಅಕ್ರಮ ಸಂಬಂಧದಿಂದ ನಮ್ಮ ಮಗಳು ನೊಂದಿದ್ದಳು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ಬಳಿಕ ಮೃತ ಲಿಖಿತಾ ಪತಿ ಮನೋಜ್ ಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Advertisement. Scroll to continue reading.



































