ಸಿನೆಮಾ : ನಟಿ ಸಾಯಿ ಪಲ್ಲವಿ ತನ್ನ ಇತ್ತೀಚಿನ ಚಿತ್ರ ವಿರಾಟ ಪರ್ವಂ ಚಿತ್ರ ಪ್ರಚಾರ ಮಾಡುವಾಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನ ಗೋರಕ್ಷಣೆಯೊಂದಿಗೆ ಹೋಲಿಸಿ ಮಾತನಾಡಿದ್ದರು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ಇದೀಗ ಸಾಯಿ ಪಲ್ಲವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಸಾಯಿ ಪಲ್ಲವಿ ವಿರುದ್ಧ ಬಜರಂಗದಳ ವಿದ್ಯಾನಗರ ಜಿಲ್ಲಾ ಸಮಿಯೋಜಕ್ ದೂರು ನೀಡಿದ್ದು, ಹೈದರಾಬಾದ್ʼನಲ್ಲಿ ಪ್ರಕರಣ ದಾಖಲಾಗಿದೆ .

ಈ ಬಗ್ಗೆ ಟ್ವೀಟ್ ಮೂಲಕ ಸಂಘಟನೆ ಮಾಹಿತಿ ನೀಡಿದೆ. ಸುಲ್ತಾನ್ ಬಜಾರ್ ಪಿಎಸ್ ನಲ್ಲಿ ಸಾಯಿ ಪಲ್ಲವಿ ವಿರುದ್ಧ ಬಲೋಪಸಮ ಕೇಂದ್ರ ಪ್ರಮುಖ್ ಪ್ರಕರಣ ದಾಖಲಿಸಿದ್ದಾರೆ. ‘ನಿಮ್ಮ ಅವಹೇಳನಕಾರಿ ಹೇಳಿಕೆಗಳಿಗಾಗಿ ಇಡೀ ಸಂಘಟನೆ, ದೇಶಕ್ಕೆ ವಿಶೇಷವಾಗಿ ಕಾಶ್ಮೀರಿ ಹಿಂದೂಗಳಿಗೆ ಕ್ಷಮೆಯಾಚಿಸಿ, ಇಲ್ಲದಿದ್ದರೆ ಅದು ಇನ್ನಷ್ಟು ಹದಗೆಡುತ್ತದೆ’ ಎಂದು ಹೇಳಿದೆ.
ಸಾಯಿ ಪಲ್ಲವಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಕೆಲವರು ಸಾಯಿ ಪಲ್ಲವಿ ಪರವಾಗಿ ಟ್ವೀಟ್ ಮಾಡಿತ್ತಿದ್ದಾರೆ. ಇನ್ನು ಕೆಲವರು ಸಾಯಿ ಪಲ್ಲವಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು ಟ್ವಿಟರ್ನಲ್ಲಿ ಬಾಯ್ಕಾಟ್ ವಿರಾಟಪರ್ವಂ ಎಂದು ಟ್ವೀಟ್ ಮಾಡುತ್ತಿದ್ದಾರೆ.


































