17,000 ಅಡಿ ಎತ್ತರದಲ್ಲಿ ಹಿಮದ ನಡುವೆ ಐಟಿಬಿಪಿಯಿಂದ ಯೋಗಾಸನ ಪ್ರದರ್ಶನ
Published
2
ದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ. ದೇಶಾದ್ಯಂತ 8ನೇ ವರ್ಷದ ಯೋಗದ ದಿನವನ್ನು ಆಚರಿಸಲಾಗುತ್ತಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ಸುಮಾರು 17,000 ಅಡಿಗಳಷ್ಟು ಎತ್ತರದಲ್ಲಿರುವ ಲಡಾಖ್ನ ಹಿಮದಿಂದ ಆವೃತವಾದ ಎತ್ತರದ ಪ್ರದೇಶದಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ.
ಭಾರತದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಸೈನಿಕರು ತಮ್ಮ ಬೆಂಬಲವನ್ನು ಪ್ರದರ್ಶಿಸಿದರು. ಉತ್ತರಾಖಂಡದ ಕೇದಾರನಾಥದಿಂದ ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ ವರೆಗೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಗಳು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದವು.