Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಕ್ಷೇಮಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯ ಭಾರತಿ ಜಿಲ್ಲಾ ಸಮಿತಿ ಬ್ರಹ್ಮಾವರ ತಾಲೂಕು ಸಮಿತಿಯ ಸಹಯೋಗದಲ್ಲಿ ಮಂಗಳವಾರ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆಯ ಸಭಾಂಗಣದಲ್ಲಿ ಯೋಗ ದಿನಾಚರಣೆ ಜರುಗಿತು.


ಡಾ.ಜಯರಾಮ ಭಟ್ , ಗೋಪಾಲಕೃಷ್ಣ ದೀಕ್ಷೀತ್ ಮತ್ತು ಪ್ರಿಯಾಂಕ ದೀಕ್ಷಿತ್ ಇವರಿಂದ ಯೋಗಾಸನ , ಪ್ರಾಣಾಯಾಮ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿದರು.
ಆರೋಗ್ಯ ಭಾರತಿಯ ಪ್ರಭಾಕರ ಭಟ್ , ಡಾ. ವಿನಯಚಂದ್ರ ಶೆಟ್ಟಿ, ಡಾ. ಸತೀಶ್ ಪೈ ಕಾರ್ಯಕ್ರಮ ಆಯೋಜಿಸಿದ್ದರು.

Advertisement. Scroll to continue reading.


ಪಾಂಡುರಂಗ ಭಟ್ , ಪ್ರಜ್ಯೋತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹದಿಹರೆಯದ ಯುವಕ ಯುವತಿಯರೂ ಸೇರಿದಂತೆ 80 ರ ವಯಸ್ಸಿನವರು ಕೂಡಾ ಭಾಗವಹಿಸಿದ್ದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಅರ್ಥಪೂರ್ಣವಾಗಿ ಯೋಗ ದಿನಾಚರಣೆಯನ್ನು ಆಚರಿಸಿದ್ದೇವು. 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸಲಾಗುವುದು.ಡಾ.ವಿನಯಚಂದ್ರ ಶೆಟ್ಟಿ, ವೈದ್ಯ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!