Connect with us

Hi, what are you looking for?

Diksoochi News

ಸಿನಿಮಾ

ಗಾಬರಿ ಪಡುವ ಅಗತ್ಯವಿಲ್ಲ, ದಿಗಂತ್ ಆರೋಗ್ಯವಾಗಿದ್ದಾರೆ : ನಿರ್ದೇಶಕ ಯೋಗರಾಜ್ ಭಟ್

2

ಬೆಂಗಳೂರು: ನಟ ದಿಂಗತ್ ಸ್ಥಿತಿ ಗಂಭೀರವಾಗಿಲ್ಲ. ಅವರು ಅರಾಮಾಗಿದ್ದಾರೆ. ಅವರಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ. ದಿಗಂತ್ ತಂದೆ ಹಾಗೂ ನಾನು ಅವರನ್ನು ಮಾತನಾಡಿಸಿಕೊಂಡು ಬಂದಿದ್ದೇವೆ. ಲವಲವಿಕೆಯಿಂದ ಇದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು‌

ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದೀಗ ಕತ್ತಿನ ಭಾಗಕ್ಕೆ ಪೆಟ್ಟಾಗಿರೋ ಕಾರಣ ಶಸ್ತ್ರ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಟ ದಿಗಂತ್ ಆರೋಗ್ಯವಾಗಿದ್ದಾರೆ. ಅವರೊಂದಿಗೆ ಈಗ ತಾನೇ ಮಾತನಾಡಿಸಿಕೊಂಡು ಬಂದ್ವಿ. ಅವರ ತಂದೆ ಕೂಡ ಮಾತನಾಡಿಸಿದ್ರು. ಗೋವಾದ ಸಮುದ್ರದ ದಡದಲ್ಲಿ ಸ್ಟಂಟ್ ಮಾಡುತ್ತಿದ್ದಂತ ಸಂದರ್ಭದಲ್ಲಿ ಕತ್ತಿನ ಭಾಗಕ್ಕೆ ಸಣ್ಣ ಪೆಟ್ಟಾಗಿದೆ ಅಷ್ಟೇ.

Advertisement. Scroll to continue reading.

ಅವರ ಕತ್ತಿನ ಭಾಗಕ್ಕೆ ಆಗಿರುವಂತ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ನಡೆಸಲಿದ್ದಾರೆ. ಆ ಬಳಿಕ ಮತ್ತೆ ಅರಾಮಾಗಲಿದ್ದಾರೆ. ನಟ ದಿಗಂತ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಯಾರೂ ಹೆದರುವಂತದ್ದು ಏನೂ ಆಗಿಲ್ಲ. ನಟ ದಿಗಂತ್ ಚೆನ್ನಾಗಿದ್ದು, ಶಸ್ತ್ರ ಚಿಕಿತ್ಸೆಯ ಬಳಿಕ ಸರಿಯಾಗಲಿದ್ದಾರೆ ಎಂದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!