ಅಫ್ಘಾನಿಸ್ತಾನ : ಇಲ್ಲಿ ಸಂಭವಿಸಿದ ತೀವ್ರ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಕನಿಷ್ಠ 1000ಕ್ಕೆ ಏರಿಕೆ ಎಂದು ದೇಶದ ವಿಪತ್ತು ನಿರ್ವಹಣಾ ಉಪ ಸಚಿವರು ಬುಧವಾರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಕನಿಷ್ಠ 1000 ಜನರು ಸಾವನ್ನಪ್ಪಿದ್ದಾರೆ ಮತ್ತು 750 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನ ಗಡಿ ಬಳಿಯ ಪಕ್ತಿಕಾ ಪ್ರಾಂತ್ಯದ ಸಂತ್ರಸ್ತರನ್ನ ಹೆಲಿಕಾಪ್ಟರ್ʼಗಳಲ್ಲಿ ಸಾಗಿಸಿ ಪ್ರದೇಶದಿಂದ ಏರ್ ಲಿಫ್ಟ್ ಮಾಡಲಾಗುತ್ತಿದೆ. ಭೂಕಂಪದಿಂದಾಗಿ ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಹಲವು ಮನೆಗಳು ನಾಶವಾಗಿವೆ.
Advertisement. Scroll to continue reading.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಭಾಗಗಳವರೆಗೆ ಸುಮಾರು 500 ಕಿಮೀ ಉದ್ದಕ್ಕೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದ್ದು, ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗಳಲ್ಲಿ ಕೂಡ ಭೂಮಿ ನಡುಗಿದ ಅನುಭವವಾಗಿದೆ.
In this article:Afghanistan, Diksoochi news, diksoochi Tv, diksoochi udupi, earth quake

Click to comment