ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪೊಲೀಸ್ ಠಾಣೆ , ವೃತ್ತ ನೀರೀಕ್ಷಕರ ಕಛೇರಿ ಬಳಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಭೂತ ಸೌಲಭ್ಯ ಅಭಿವೃದ್ಧಿ ನಿಗಮ ಬೆಂಗಳೂರು ಇವರ ವತಿಯಿಂದ 3 ಮಹಡಿಯ 5 ಮನೆಗಳು ನಿರ್ಮಾಣದ ಹಂತದಲ್ಲಿದೆ.
ಬ್ರಹ್ಮಾವರ ಮತ್ತು ಕೋಟ ಠಾಣೆಯ ಬಹುತೇಕ ಪೋಲೀಸ್ ಕುಟುಂಬದ ಸಿಬ್ಬಂದಿಗಳು ವಸತಿಸೌಲಭ್ಯದ ಕೊರತೆಯಿಂದ ಬೇರೆ ಬೇರೆ ಭಾಗದಲ್ಲಿ ವಾಸ ಮಾಡುತ್ತಿದ್ದು, ಮಕ್ಕಳ ಶಾಲಾ ಶಿಕ್ಷಣಕ್ಕೆ ಮತ್ತು ಠಾಣೆಯ ಸನಿಹವೇ ಮನೆಗಳು ಆಗುವುದರಿಂದ ನಗರ ಮಧ್ಯಭಾಗವಾದ ಜಾಗದಲ್ಲಿ ಆಗುತ್ತಿರುವುದು ಹಲವು ರೀತಿಯಲ್ಲಿ ಉಪಯೋಗವಾಗಲಿದೆ.

ಒಟ್ಟು 7420 ಚದರ ಅಡಿಯಲ್ಲಿ, 1 ಫ್ಲ್ಯಾಟ್ ನಲ್ಲಿ 5 ಕುಟುಂಬಗಳಂತೆ 5 ಕಟ್ಟಡದಲ್ಲಿ 60 ಪೋಲೀಸ್ ಸಂಸಾರಗಳು ವಾಸ ಮಾಡಬಹುದು.
ಈಗಾಗಲೇ ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ 40 ಸಿಬ್ಬಂದಿಗಳು, ಕೋಟದಲ್ಲಿ 35 ಸಿಬ್ಬಂದಿಗಳು ಇದ್ದು, 2 ಠಾಣೆಗಳಿಗೆ, ಇದು 2 ಠಾಣೆಗಳಿಗೆ ಉಪಯುಕ್ತವಾಗಲಿದೆ.

ಕುಂದಾಪುರ ಮಂಜುಶ್ರೀ ಗುತ್ತಿಗೆದಾರರು ನಿರ್ಮಿಸುತ್ತಿರುವ ಕಾಮಗಾರಿಯನ್ನು ಬುಧವಾರ ಬೆಂಗಳೂರಿನ ನಿಗಮದ ಅಧಿಕಾರಿಗಳು ಆಗಮಿಸಿ ನಿರ್ಮಾಣದ ಗುಣಮಟ್ಟವನ್ನು ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿರ್ಮಾಣದಿಂದ ಅಂತಿಮ ಕೆಲಸವಾಗುವ ಒಟ್ಟು ಅವಧಿಯಂತೆ ಮುಂದಿನ ವರ್ಷ ಜೂನ್ ತಿಂಗಳಿಗೆ ಕಾಮಗಾರಿ ಅಂತಿಮಗೊಂಡು ಲೋಕಾರ್ಪಣೆ ಗೊಳ್ಳಲಿದ್ದು, ಗುತ್ತಿಗೆ ದಾರರು ಪೂರ್ಣಗೊಳಿಸಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
