Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ತೀರಾ ಹದಗೆಟ್ಟಿದೆ ಹಂಗಾರಕಟ್ಟೆಯ ಎಂ.ಜಿ.ರೋಡ್ – ಚಿಪ್ಪಿಕಟ್ಟೆ ರಸ್ತೆ; ಓಡಾಡಲೂ ಆಗುತ್ತಿಲ್ಲವೆಂದು ಗ್ರಾಮಸ್ಥರ ಅಳಲು

0

ಬ್ರಹ್ಮಾವರ : ಬಾಳಕುದ್ರು, ಹಂಗಾರಕಟ್ಟೆಯ ಎಂ.ಜಿ.ರೋಡ್ ನಿಂದ  ಚಿಪ್ಪಿಕಟ್ಟೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದೆ. ಇಲ್ಲಿ ವಾಹನ ಸಂಚಾರ ಬಿಡಿ, ನಡೆದಾಡುವುದು ಕಷ್ಟಕರವಾಗಿದೆ.


ಇದೀಗ ಮಳೆಯ ಪರಿಣಾಮ ಈ ರಸ್ತೆಯು ಮತ್ತಷ್ಟು ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.  ರಸ್ತೆಯ ಗುಂಡಿಗೆ ಕೆಂಪು ಮಣ್ಣು ಸುರಿದಿರುವ ಕಾರಣ ತೀರಾ ಹದಗೆಟ್ಟಿರುವ ರಸ್ತೆಯಲ್ಲಿ ಕಾಲಿಡಲು ಸಹ್ಯವೆನಿಸುತ್ತಿಲ್ಲ.


ಈ ಭಾಗದಲ್ಲಿ 100 ಕ್ಕೂ ಅಧಿಕ ಮನೆಗಳಿವೆ. ಅಂಗನವಾಡಿಗೆ ಹೋಗುವ ಮಕ್ಕಳು, ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಮಂದಿಗೆ ಈ ರಸ್ತೆ ಬಳಸುತ್ತಾರೆ. ಆದರೆ, ಈಗ ಮಾತ್ರ ಕೈ ಕಾಲು ಕೆಸರು ಮಾಡಿಕೊಂಡು ಸಾಗಬೇಕು. ಅಲ್ಲದೇ, ಬೈಕ್ ಸವರಾರು ಇಲ್ಲಿ ಸ್ಕಿಡ್ ಆಗಿ ಬಿದ್ದು, ಶಪಿಸಿದ್ದೂ ಇದೆ.

ಶಾಲಾ ಮಕ್ಕಳು ಮಾತ್ರವಲ್ಲದೇ ಇಡೀ ಗ್ರಾಮಸ್ಥರು ಪರದಾಡುವಂತಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!