ಶಿವಮೊಗ್ಗ: ಬೋಟಿಂಗ್ ಉದ್ಘಾಟನೆ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರ ತಲೆಗೆ ಪೆಟ್ಟು ಬಿದ್ದಿದೆ.
ಶಿವಮೊಗ್ಗದ ಸಕ್ರೆಬೈಲಿನಲ್ಲಿ ನಡೆದ ಘಟನೆ ನಡೆದಿದೆ. ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್ ವ್ಯವಸ್ಥೆ ಉದ್ಘಾಟನಾ ಸಮಾರಂಭಕ್ಕೆ ಬಿ.ವೈ. ರಾಘವೇಂದ್ರ ಆಗಮಿಸಿದ್ದರು.
ಬೋಟ್ ಉದ್ಘಾಟನೆ ಮಾಡಿ ಬೋಟ್ನಿಂದ ಕೆಳಗೆ ಇಳಿಯುತ್ತಿದ್ದಾಗ ಸ್ಕ್ರೂ ತಗುಲಿದ ಪರಿಣಾಮ ಬಿ.ವೈ. ರಾಘವೇಂದ್ರ ಅವರ ತಲೆಗೆ ಗಾಯವಾಗಿದೆ. ಹೀಗಾಗಿ ಬಿ.ವೈ. ರಾಘವೇಂದ್ರ ಅವರಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
Advertisement. Scroll to continue reading.