ಶಿವಮೊಗ್ಗ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರತಿಕಾ ವಿತರಕ ಸಾವನ್ನಪ್ಪಿರುವ ಘಟನೆ ಸಾಗರದ ಪ್ರವಾಸಿ ಮಂದಿರದ ಬಳಿ ಬೆಳ್ಳಂಬೆಳಗ್ಗೆ ನಡೆದೆ. ಅಪಘಾತದಿಂದ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡಿದೆ.
25 ವರ್ಷದ ಬೆಳಲಮಕ್ಕಿಯ ಗಣೇಶ್ ಸಾವನ್ನಪ್ಪಿರುವ ಯುವಕ. ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಸೈಕಲ್ ನಲ್ಲಿ ಹೊರಟಿದ್ದ ಯವಕನಿಗೆ ಡಿಕ್ಕಿ ಆಗಿದೆ.
ಘಟನೆಯಲ್ಲಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೈಕಲ್ ಹಿಂಬದಿ ಸವಾರ ರಾಹುಲ್ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement. Scroll to continue reading.
ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.