ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇಂದು 10 ನೇ ತರಗತಿ ಟರ್ಮ್ 2 ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ ಎಂದು ಹೇಳಿದೆ.
ಫಲಿತಾಂಶಗಳನ್ನು ಇಂದು ಬೆಳಿಗ್ಗೆ 11 ಗಂಟೆಗೆ cbse.gov.in ಮತ್ತು cbseresults.nic.in ಅಪ್ಲೋಡ್ ಮಾಡಬೇಕಾಗಿತ್ತು, ಆದರೆ ಈಗ, ಫಲಿತಾಂಶ ಘೋಷಣೆಯ ದಿನಾಂಕ ದೃಢೀಕರಿಸಿಲ್ಲ.
ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ಟರ್ಮ್ 2 ಪರೀಕ್ಷೆಗಳು ನಡೆದಿದ್ದು, 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
Advertisement. Scroll to continue reading.
ಸಿಬಿಎಸ್ಇ ‘ಪರೀಕ್ಷಾ ಸಂಗಮ್’ ಎಂಬ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಅದರಲ್ಲಿ ಪರೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.