ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕುಂದಾಪುರದಿಂದ ಬೈಂದೂರು ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ತ್ರಾಸಿ-ಮರವಂತೆ ಕಡಲ ಕಿನಾರೆಗೆ ರಾ.ಹೆ ರಸ್ತೆಯಿಂದ ಸುಮಾರು 40 ಅಡಿ ಕೆಳಭಾಗದಲ್ಲಿ ಪಲ್ಟಿ ಹೊಡೆದು ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ರೋಶನ್ ಮೃತ ವ್ಯಕ್ತಿ.

ಹೊಸಾಡು ಗ್ರಾಮದ ಕಂಚುಗೋಡು ಬಳಿ ಶವ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ನಡೆದ ಘಟನೆಯಲ್ಲಿ ಉದ್ಯಮಿ ನೇರಂಬಳ್ಳಿ ರಮೇಶ್ ಆಚಾರ್ ಅವರ ಪುತ್ರ ವಿರಾಜ್ ಆಚಾರ್ ಮೃತಪಟ್ಟಿದ್ದಾರೆ. ಸಹ ಪ್ರಯಾಣಿಕ ರೋಶನ್ ನಾಪತ್ತೆಯಾಗಿದ್ದರು.
Advertisement. Scroll to continue reading.


ಕಾರಿನಲ್ಲಿದ್ದ ಒಟ್ಟು 4 ಮಂದಿ ಪೈಕಿ ಇಬ್ಬರನ್ನು ಸ್ಥಳಿಯರು ರಕ್ಷಣೆ ಮಾಡಲಾಗಿತ್ತು.
ಇದೀಗ ರೋಶನ್ ಶವ ಹೊಸಾಡು ಗ್ರಾಮದ ಕಂಚುಗೋಡು ಬಳಿ ಪತ್ತೆಯಾಗಿದೆ. ಈಶ್ವರ ಮಲ್ಪೆ ಟೀಂ ಕಾರ್ಯಾಚರಣೆ ನಡೆಸಿದ್ದು, ಗಂಗೊಳ್ಳಿ ಎಸ್ ಐ ವಿನಯ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


































