ಬೀದರ್ : ಏರ್ ಕಮೋಡೋರ್ ಸಂಜಯ್ ಶರ್ಮಾ ಮತ್ತು ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಂತಹದುದೊಂದು ಸಾಧನೆ ಮೆರೆದ ಮೊದಲ ತಂದೆ-ಮಗಳ ಜೋಡಿ ಎಂಬ ಹಿರಿಮೆ ಇವರದು.
ಏರ್ ಕಮೋಡೋರ್ ಸಂಜಯ್ ಶರ್ಮಾ ಅವರನ್ನ 1989ರಲ್ಲಿ ಐಎಎಫ್ ನ ಫೈಟರ್ ಸ್ಟ್ರೀಮ್ ನಲ್ಲಿ ನಿಯೋಜಿಸಲಾಗಿತ್ತು. ಇವರು ಮಿಗ್ -21 ಚದರನ್ ಮತ್ತು ಮುಂಚೂಣಿಯ ಫೈಟರ್ ಸ್ಟೇಷನ್ ಅನ್ನು ಕಮಾಂಡರ್ ಆಗಿ ಹೊಂದಿರುವ ಯುದ್ಧ ಕಾರ್ಯಾಚರಣೆಗಳ ವ್ಯಾಪಕ ಅನುಭವವನ್ನ ಹೊಂದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ಲ್ಲಿ ಬಿಟೆಕ್ ಮುಗಿಸಿರುವ ಮಗಳು ಆನನ್ಯ ಐಎಎಫ್‌ನ ಫ್ಲೈಯಿಂಗ್ ಬ್ರಾಂಚ್ ತರಬೇತಿಗೆ ಆಯ್ಕೆಯಾದರು. ಡಿಸೆಂಬರ್ 2021ರಲ್ಲಿ ಅವರನ್ನ ಫೈಟರ್ ಪೈಲಟ್ ಆಗಿ ನಿಯೋಜಿಸಲಾಯಿತು. ಅವರು ಉನ್ನದ ಯುದ್ಧ ವಿಮಾನದಲ್ಲಿ ಪದವಿ ಪಡೆದು, ತರಬೇತಿ ಪಡೆದುಕೊಳ್ಳುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ.
ಮೇ 30 ರಂದು ತಂದೆ-ಮಗಳು ಇಬ್ಬರೂ ಬೀದರ್ ವಾಯುನೆಲೆಯಲ್ಲಿ ಹಾಕ್ -132 ವಿಮಾನದ ಅದೇ ರಚನೆಯಲ್ಲಿ ಹಾರಾಟ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

