ಮಲ್ಪೆ : ಬಿಲ್ಲವ ಸಮಾಜ ಸೇವಾ ಸಂಘ ಮಲ್ಪೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೊಡವೂರು ಬಿ ಇದರ ವತಿಯಿಂದ ಹಾಗೂ ನ್ಯೂ ಸಿಟಿ ಹಾಸ್ಪಿಟಲ್ ಉಡುಪಿ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಇವರ ಸಹಭಾಗಿತ್ವದಲ್ಲಿ “ಉಚಿತ ಆರೋಗ್ಯ ಸೇವಾ ಶಿಬಿರ” ರಂದು ಮಲ್ಪೆ ನಾರಾಯಣಗುರು ಸಮುದಾಯ ಭವನದಲ್ಲಿ ಜರುಗಿತು
ಬಿಲ್ಲವ ಸಮಾಜ ಸೇವಾ ಸಂಘ ಮಲ್ಪೆ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಜತ್ತನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭಾ ಸದಸ್ಯ ಕೆ. ವಿಜಯ್ ಕೊಡವೂರು ಉಪಸ್ಥಿತರಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಇದರ ವೈದ್ಯಾಧಿಕಾರಿ ಡಾl ಜೇಷ್ಮಾ ಫಿಕಾರ್ಡೋ ಮತ್ತು ಉಡುಪಿ TB ಘಟಕ ಇದರ ಮೇಲ್ವಿಚಾರಕರಾದ ಪ್ರಶಾಂತ್ ರವರು ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಕ್ಷಯರೋಗ ದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಉಚಿತ ಆರೋಗ್ಯ ಸೇವಾ ಶಿಬಿರದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಕೋವಿಡ್ ಲಸಿಕೆ ಹಾಗೂ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇದರ ಅಧ್ಯಕ್ಷ ರಘುರಾಮ್ ಸುವರ್ಣ, ಕಾರ್ಯದರ್ಶಿ ಲಕ್ಷ್ಮೀಶ್ ಎಂ. ಬಂಗೇರ, ಕೆ ಎಂ ಸಿ ಮಣಿಪಾಲ ಇದರ ವೈದ್ಯಕೀಯ ಅಧಿಕಾರಿ ಡಾ. ಅಫ್ರೋಸ್ ಜಹಾನ್, ನಾರಾಯಣಗುರು ಸೇವಾದಳದ ಅಧ್ಯಕ್ಷ ನಿತಿನ್ ಪೂಜಾರಿ, ಬಿಲ್ಲವ ಮಹಿಳಾ ಘಟಕ ಅಧ್ಯಕ್ಷ ಆಶಾ ಜೆ ಬಂಗೇರ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಿ. ಸಿ ಕುಸುಮ, ನ್ಯೂ ಸಿಟಿ ಮೆಡಿಕಲ್ ಕಾಲೇಜು ಉಡುಪಿ ಇದರ ಉಪನ್ಯಾಸಕಿ ಸೋನಿಯಾ, ಸಮುದಾಯ ಆರೋಗ್ಯ ಅಧಿಕಾರಿ ಮೈತ್ರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಿಶಾ, ಸಂಘದ ಕಾರ್ಯಕಾರಿ ಹಾಗೂ ಉಪ ಸಮಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಮತ್ತು ಮಣಿಪಾಲ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೊಡವೂರು ಬಿ. ಇದರ ಸಿಬ್ಬಂದಿ ವರ್ಗ, ನ್ಯೂ ಸಿಟಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಸುರೇಖಾ ಸ್ವಾಗತಿಸಿ , ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೊಡವೂರು ಇದರ ಸಮುದಾಯ ಆರೋಗ್ಯ ಅಧಿಕಾರಿ ಮೈತ್ರಿ ವಂದಿಸಿದರು. ನೀಲಾವತಿ ಕಾರ್ಯಕ್ರಮ ನಿರೂಪಿಸಿದರು.



































