ದೆಹಲಿ : ಉದಯಪುರದ ಟೈಲರ್ ಕಹಯ್ಯಾ ಲಾಲ್ ಹತ್ಯೆಯ ಐದನೇ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
30 ವರ್ಷದ ಮೊಹಮ್ಮದ್ ಮೊಹ್ಸಿನ್ ಬಂಧಿತ ಆರೋಪಿ.
ಮೊಹ್ಸಿನ್‌ನನ್ನು ಮಂಗಳವಾರ ಉದಯಪುರದಲ್ಲಿ ಬಂಧಿಸಲಾಗಿದೆ. ಬಳಿಕ ಭಯೋತ್ಪಾದನಾ ತನಿಖಾ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ.
Advertisement. Scroll to continue reading.
ವಿಚಾರಣೆ ವೇಳೆ ಕೊಲೆಗಾರರು ಮೊಹ್ಸಿನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮೊಹ್ಸಿನ್ ಕೊಲೆಯ ಇಬ್ಬರು ಪ್ರಮುಖ ಆರೋಪಿಗಳಾದ ರಿಯಾಜ್ ಅಟ್ಟಾರಿ ಮತ್ತು ಮೊಹಮ್ಮದ್ ಘೌಸ್‌ಗೆ ಟೈಲರ್ ಕನ್ಹಯಾ ಲಾಲ್ ಅವರ ಚಲನವಲನಗಳನ್ನು ಸಮೀಕ್ಷೆ ಮಾಡಲು, ಪರಿಶೀಲಿಸಲು ಸಹಾಯ ಮಾಡಿದ್ದ ಎನ್ನಲಾಗಿದೆ.