ವರದಿ : ಶ್ರೀದತ್ತ ಹೆಬ್ರಿ
ಉಡುಪಿ : ರವಿವಾರ ಮುಂಜಾನೆ ಆಗುಂಬೆ ಘಾಟಿಯ ರಾಷ್ಟ್ರೀಯ ಹೆದ್ದಾರಿ 169A ಹನ್ನೊಂದು ನೇ ತಿರುವಿನಲ್ಲಿ ಭೂಕುಸಿತ ವಾಗಿರುವುದರಿಂದ ಜುಲೈ ಹನ್ನೆರಡು ರಿಂದ ಜುಲೈ 30 ರ ವರೆಗೆ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ರವಿವಾರ ಆದೇಶಿಸಿದ್ದಾರೆ.
ಜುಲೈ ಹನ್ನೆರಡು ಮಂಗಳವಾರದಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನಗಳಿಗೆ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಘನವಾಹನಗಳು ಬಸ್ಸು ಲಾರಿ ಇನ್ನಿತರ ಭಾರೀ ವಾಹನಗಳು ತೀರ್ಥಹಳ್ಳಿ ಕೊಪ್ಪ ಶೃಂಗೇರಿ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಹಾಗೂ ತೀರ್ಥಹಳ್ಳಿ ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಉಡುಪಿಗೆ ವಾಹನಗಳು ಸಂಚರಿಸಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ.
Advertisement. Scroll to continue reading.


In this article:Agumbe Ghat, dc koorma rao, Diksoochi news, diksoochi Tv, diksoochi udupi
Click to comment

































