Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆ; ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿ ರೈತರಿಗೆ ಅನ್ಯಾಯ ಆಗಬಾರದು : ಪ್ರತಾಪಚಂದ್ರ ಶೆಟ್ಟಿ

1

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಅರಣ್ಯದಲ್ಲಿ ಹಲವು ವಿಧಗಳಿರಬಹುದು, ಆದರೆ ಡೀಮ್ಡ್‌ಫಾರೆಸ್ಟ್‌ಹೆಸರಿನಲ್ಲಿ ಕೃಷಿಕರಿಗೆ, ಬಡ ಜನತೆಗೆ ಅನ್ಯಾಯವಾಗಬಾರದು‌. ಸರ್ಕಾರ ಡೀಮ್ಡ್‌ಫಾರೆಸ್ಟ್‌ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಸರಿಪಡಿಸಿ, ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಎಂದು ವಿಧಾನಸಭೆಯ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದರು.

ಅವರು ಹೆಬ್ರಿಯ ಶೀಲಾ ಸುಭೋದ್‌ಬಲ್ಲಾಳ್‌ಬಂಟರ ಭವನದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ರೈತರ ಸಭೆಯಲ್ಲಿ ಮಾತನಾಡಿದರು.

Advertisement. Scroll to continue reading.

ಈ ಹಿಂದೆ ಸಿ ಮತ್ತು ಡಿ ಜಮೀನನ್ನು ಕೃಷಿ ಯೋಗ್ಯವಲ್ಲದ ಜಮೀನುಗಳನ್ನು ಗುರುತಿಸಿ ಸರ್ಕಾರಿ ಜಮೀನು ಎಂದು ಹೇಳಲಾಗುತ್ತಿತ್ತು. ಆದರೆ ಯಾವೂದೇ ಗೊಂದಲಗಳು ಇರಲಿಲ್ಲ. ಈಗ ರೈತರು, ಬಡ ಜನತೆಗೆ ಕೃಷಿ ಮಾಡಿದ ಜಮೀನನ್ನೇ ಡೀಮ್ಡ್‌ಫಾರೆಸ್ಟ್‌ಸಹಿತ ವಿವಿಧ ಹೆಸರಿನಲ್ಲಿ ರೈತರಿಗೆ ಗೊಂದಲ ಮಾಡುತ್ತಿರುವುದು ಸರಿಯಲ್ಲ. ರೈತರಿಗೆ ಯಾವೂದೇ ರೀತಿಯಲ್ಲೂ ಅನ್ಯಾಯವಾಗಬಾರದು ಎಂದು ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ರೈತರ ಕುಮ್ಕಿ ಹಕ್ಕು, ಡೀಮ್ಡ್‌ಫಾರೆಸ್ಟ್‌ಸಮಸ್ಯೆ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ, ಕಾಡು ಪ್ರಾಣಿಗಳಿಂದ ಹಾವಳಿ, ಕೃಷಿ ನಾಶ, ಸರ್ಕಾರದಿಂದ ದೊರೆಯುವ ಪರಿಹಾರದಲ್ಲಿ ವಿಳಂಬ ನೀತಿ, ಸರ್ಕಾರದ ಸಹಾಯಧನ ಮತ್ತು ಕಳಪೆ ಗುಣಮಟ್ಟದ ಯಂತ್ರ ವಿತರಣೆ ಮತ್ತು ವಿದ್ಯುತ್‌ಇಲಾಖೆಯ ಖಾಸಗಿಕರಣ ಸಹಿತ ಹಲವು ವಿಚಾರಗಳ ಚರ್ಚೆ ನಡೆಯಿತು.

ಮೇಗದ್ದೆ ರಮೇಶ ಶೆಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಗಮನ ಸೆಳೆದರು. ಕೃಷಿಕರಾದ ಕುಚ್ಚೂರಿನ ಎಚ್.ರಾಜೀವ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಹರ್ಷ ಶೆಟ್ಟಿ ಬೇಳಂಜೆ, ಶಾಡಿಗುಂಡಿ ರಾಜು ಶೆಟ್ಟಿ, ವಿಶ್ವಾಸ್‌ಶೆಟ್ಟಿ ಸಹಿತ ಹಲವರು ವಿವಿಧ ಸಮಸ್ಯೆಗಳನ್ನು ರೈತ ಮುಖಂಡರ ಗಮನಕ್ಕೆ ತಂದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಚೈತನ್ಯ ಕೆಎಸ್‌ಅಡಿಕೆ ತೋಟ ಸಹಿತ ಸಮಗ್ರ ಕೃಷಿಯ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರಾದ ಸದಾಶಿವ ವಂಡ್ಸೆ, ಪ್ರದೀಪ ಬಲ್ಲಾಳ್‌, ಕೆದೂರು ಸದಾಶಿವ ಶೆಟ್ಟಿ, ಬಲಾಡಿ ಸಂತೋಷ ಶೆಟ್ಟಿ, ಹೆಬ್ರಿ ವಲಯದ ವಿವಿಧ ಘಟಕಗಳ ಪ್ರಮುಖರಾದ ಕಿರಣ್‌ತೋಳಾರ್‌, ವಾದಿರಾಜ ಶೆಟ್ಟಿ, ಶ್ರೀಕಾಂತ್‌ಹೆಗ್ಡೆ, ಮಹೇಶ ಶೆಟ್ಟಿ ಕುಚ್ಚೂರು, ವಿಜಯ ಕುಮಾರ್‌ಶೆಟ್ಟಿ, ಜಯರಾಮ ಹಾಂಡ, ಸುಧಾಕರ ಶೆಟ್ಟಿ ದೇವಳ ಬೈಲು, ರುಘುರಾಮ ಕುಲಾಲ್‌, ರಾಜೇಶ ಪೂಜಾರಿ, ಮಿಥುನ್‌ಶೆಟ್ಟಿ ಚಾರ, ರೋಶನ್‌ಕುಮಾರ್‌ಶೆಟ್ಟಿ, ಶುಭಧರ ಶೆಟ್ಟಿ ಮುದ್ರಾಡಿ, ಸತೀಶ ಶೇರಿಗಾರ್‌, ರಮೇಶ ಶೆಟ್ಟಿ ಅಜ್ಜೋಳ್ಳಿ, ಉದಯ ಆಚಾರ್‌ತಣ್ಣೀರು, ಶ್ರೀಕಾಂತ್‌ಭಟ್‌ಶಿವಪುರ, ಸುಭಾಶ್ಚಂದ್ರ ನಾಯ್ಕ್‌, ಗುಂಡಾಳ ಸದಾಶಿವ ಶೆಟ್ಟಿ, ಕೃಷ್ಣ ಆಚಾರ್ಯ ಮುದ್ರಾಡಿ, ಲಕ್ಷ್ಮಣ ಆಚಾರ್‌ವರಂಗ, ರವಿ ಪೂಜಾರಿ ಮುನಿಯಾಲು ಮುಂತಾದವರು ಹಾಜರಿದ್ದರು.

ಮುಖಂಡರಾದ ಚೋರಾಡಿ ಅಶೋಕ ಶೆಟ್ಟಿ ನಿರೂಪಿಸಿ ನವೀನ್‌ಕೆ ಅಡ್ಯಂತಾಯ ಸ್ವಾಗತಿಸಿ ಬೆಳ್ವೆ ಸತೀಶ್‌ಕಿಣಿ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!