ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸೀತಾ ನದಿಯ ಪ್ರವಾಹದ ಕೇಂದ್ರ ಸ್ಥಾನವಾದ ಬ್ರಹ್ಮಾವರ ತಾಲೂಕು ನೀಲಾವರ ಬಾವಲಿಕುದ್ರು 5 ದಿನದಿಂದ ಜಲ ದಿಗ್ಬಂದನದಿಂದ ಕುದ್ರು ಜನರು ಕಂಗಾಲಾಗಿದ್ದಾರೆ.
13 ಕುಟುಂಬ ಇದ್ದು ಸುತ್ತಲೂ ಸೀತಾನದಿ ಆವರಿಸಿಕೊಂಡ ಬಾವಲಿ ಕುದ್ರುವಿಗೆ ಯಾವೂದೇ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ. ದೊಡ್ಡ ಪ್ರವಾಹ ಬಂದಾಗ ಕುದ್ರು ಜನರು ಮನೆ ಬಿಟ್ಟು ಬೇರೆ ಭಾಗಕ್ಕೆ ವಲಸೆ ಹೋಗುತ್ತಿದ್ದು, ಚಿಕ್ಕ ಸಂಪರ್ಕ ವ್ಯವಸ್ಥೆಗೆ ಇಲ್ಲಿನ ಜನರು ಎಲ್ಲಾ ಜನನಾಯಕರಿಗೆ ಮನವಿ ನೀಡಿದರೂ ಅಸಾಧ್ಯವಾದಾಗ ಮಾಧ್ಯಮ ಮೂಲಕ ಇಲ್ಲಿನ ಗಂಭೀರ ಸಮಸ್ಯೆಯನ್ನು ಬಿತ್ತರಿಸಿದ ಬಳಿಕ ಡಾ.ವಿ.ಎಸ್.ಆಚಾರ್ಯ, ಉಡುಪಿ ಶಾಸಕ ಕೆ.ರಘುಪತಿ ಭಟ್ ಭೇಟಿ ನೀಡಿ ಸರಕಾರದ ಅನುದಾನದಿಂದ ಸೇತುವೆಯೊಂದನ್ನು ಮಾಡಿಸಿದ್ದರು.
ಈ ವರ್ಷ ಪೂರ್ವದಿಂದು ಹರಿದು ಬಂದ ಭಾರೀ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಬಂದು ಪ್ರವಾಹ ತುಂಬಿ 5 ದಿನದಿಂದ ಮನೆಯಿಂದ ಹೊರಗೆ ಬರದಂತ ಸ್ಥಿತಿ ಇಲ್ಲಿನ ಜನರು ತೀರಾ ಅತಂಕದಲ್ಲಿದ್ದರು.
ಇಂದು ಬೆಳಿಗ್ಗೆ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿಯವರು ಬಾವಲಿಕುದ್ರುವಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.


ಕುದ್ರುವಿನ ಜನತೆ ಮುರಿದು ಬಿದ್ದ ಮರಗಳು, ನೀರು ತುಂಬಿ ಕುಸಿತದ ಭೀತಿಯಲ್ಲಿರುವ ಮನೆಗಳನ್ನು ಮತ್ತು ಇಲ್ಲಿ ಸಮೀಪ ಇರುವ ಕಿಂಡಿ ಅಣೆಕಟ್ಟುವಿನಲ್ಲಿ ಮರ ಮಟ್ಟುಗಳು ತಡೆ ಒಡ್ಡಿ ಪ್ರವಾಹದ ನೀರು ಎಲ್ಲೆಂದರಲ್ಲಿ ಹರಿಯುವುದನ್ನು ವಿಕ್ಷೀಸಿ ತೀರಾ ಅಪಾಯದ ಸ್ಥಿತಿ ಕಂಡು ಬಂದಲ್ಲಿ ಸ್ಥಳಾಂತರಕ್ಕೆ ಅನುವು ಮಾಡುವುದಾಗಿ ತಿಳಿಸಿದರು.

ಕೋಟ ಕಂದಾಯ ನೀರೀಕ್ಷಕ ರಾಜು, ಬ್ರಹ್ಮಾವರ ಗ್ರಹ ರಕ್ಷಕದಳದ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಲೂಯೀಸ್, ಗ್ರಾಮ ಲೆಕ್ಕಿಗ ರಾಜಾ ಸಾಭ್ ಇನ್ನಿತರರು ಹಾಜರಿದ್ದರು.



































