ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ತೀರಾ ಅಪಾಯಕಾರಿಯಾಗಿದ್ದ ಬ್ರಹ್ಮಾವರ ಬಾರಕೂರು ರಸ್ತೆಯ ಹಂದಾಡಿಯಲ್ಲಿದ್ದ 150 ವರ್ಷದ ಹಳೆಯ ಅಶ್ವತ್ಥ ಮತ್ತು ಆಲದ ಮರವನ್ನು ಇಂದು ಕಡಿಯಲಾಯಿತು.
ಪ್ರತೀ ದಿನ ಇಲ್ಲಿ ಸಹಸ್ರಾರು ಜನರು ಬಸ್ ಅಟೋ ಲಾರಿ ಟೆಂಪೋ ಗಳಲ್ಲಿ ಸಂಚಾರ ಇರುವ ಈ ಮರದ ಸುತ್ತ ಮುತ್ತ ಅನೇಕ ಮನೆಗಳಿವೆ.
ಇವರೆಲ್ಲರೂ ಕೂಡಾ ಅನು ದಿನವೂ ಅತಂಕದಲ್ಲೇ ಇದ್ದು ಮರವನ್ನು ಕಡಿಯಲು ಅನೇಕ ವರ್ಷದಿಂದ ಹಲವಾರು ಇಲಾಖೆಗೆ ಮನವಿ ನೀಡಿದ್ದರು.

ಈ ಮರದ ಅಪಾಯದ ಕುರಿತು ಈ ಹಿಂದೆ ದಿಕ್ಸೂಚಿ ನ್ಯೂಸ್ ವರದಿ ಮಾಡಿ ಗಮನ ಸೆಳೆದಿತ್ತು. ಹಂದಾಡಿ ಗ್ರಾಮ ಪಂಚಾಯತಿ ಮತ್ತು ಬ್ರಹ್ಮಾವರ ತಾಲೂಕು ಪಂಚಾಯತಿಯ ಸಭೆಯಲ್ಲಿ ಕೂಡಾ ಎಲ್ಲಾ ಇಲಾಖೆಯ ಅಧಿಕಾರಿಗಳ ಮುಂದೆ ವರದಿಯ ಕುರಿತು ಪ್ರಸ್ತಾವನೆ ನಡೆದಿತ್ತು.

ಇಂದು ಬೃಹತ್ ಯಂತ್ರಗಳು, ಹಲವಾರು ನುರಿತ ಮರ ಕಟಾವು ಮಾಡುವ ಪರಿಣಿತರಿದ್ದು ಅರಣ್ಯ, ಮೆಸ್ಕಾಂ , ಕಂದಾಯ, ಪೊಲೀಸ್ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಂದಾಡಿ ಗ್ರಾಮ ಪಂಚಾಯತಿ ಸದಸ್ಯರುಗಳು ಮರದ ಕಟಾವು ಸಮಯದಲ್ಲಿ ಹಾಜರಿದ್ದರು.

Advertisement. Scroll to continue reading.

In this article:barkuru, Diksoochi news, diksoochi Tv, diksoochi udupi, handadi, palm tree
Click to comment

































