ಬೆಂಗಳೂರು : ವಂಚನೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ರಾಷ್ಟ್ರ ಜನಹಿತ ಪಕ್ಷ ಸ್ಥಾಪಿಸಿದ್ದ ,ನಟ, ನಿರ್ಮಾಪಕ ವಿರೇಂದ್ರ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ಜನಹಿತ ಪಕ್ಷ ಸ್ಥಾಪಿಸಿದ್ದ ಆರೋಪಿ ವಿರೇಂದ್ರ ಬಾಬು, ಚುನಾವಣೆ ಟಿಕೆಟ್ ಕೊಡುವುದಾಗಿ ನಂಬಿಸಿ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ವಿರೇಂದ್ರ ಬಾಬು ಬಂಧಿಸಿದ್ದಾರೆ.
ವಿರೇಂದ್ರ ಬಾಬು ವಿರುದ್ಧ ಬಸವರಾಜ ಘೋಷಾಲ್ ಎಂಬುವರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೊಡಿಗೆಹಳ್ಳಿ ಪೊಲೀಸರು ವಿರೇಂದ್ರ ಬಾಬುವನ್ನು ವಶಕ್ಕೆ ಪಡೆದಿದ್ದಾರೆ.
Advertisement. Scroll to continue reading.