Connect with us

Hi, what are you looking for?

Diksoochi News

Uncategorized

ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಪಿ.ವಿ.ಸಿಂಧು

1

ಕ್ರೀಡೆ : ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ ಡಬಲ್ ಪದಕ ವಿಜೇತೆ ಪಿವಿ ಸಿಂಧು ಜಯ ಸಾಧಿಸಿ ಚಾಂಪಿಯನ್‌ ಪಟ್ಟ ಮುಡುಗೇರಿಸಿಕೊಂಡಿದ್ದಾರೆ.

ಇಂದು ನಡೆದ ಸಿಂಗಾಪುರ ಓಪನ್ ಫೈನಲ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಚೀನಾದ ವಾಂಗ್ ಝಿ ಯಿ ಅವರನ್ನು 21-9, 11-21, 21-15 ಅಂತರದಿಂದ ಸೋಲಿಸಿ ಮೂರನೇ ಪ್ರಶಸ್ತಿಯನ್ನು ಗೆದ್ದರು.

ಈ ಮೂಲಕ ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಮಹಿಳಾ ಶಟ್ಲರ್ ಮತ್ತು ಮೂರನೇ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement. Scroll to continue reading.

ಸೈನಾ ನೆಹ್ವಾಲ್ (2010) ಮತ್ತು ಬಿ ಸಾಯಿ ಪ್ರಣೀತ್ (2017) ಈ ಹಿಂದೆ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಈ ಪ್ರಶಸ್ತಿಯು ಸಿಂಧು ಅವರ ಮೊದಲ ಸೂಪರ್ 500 ಪ್ರಶಸ್ತಿಯಾಗಿದೆ. ಅವರು ಈ ಹಿಂದೆ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು.

ಎರಡು ಒಲಂಪಿಕ್ ಪದಕಗಳ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್‌ನಿಂದ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಹೊಂದಿರುವ ಅವರ ಖಾತೆಗೆ ಇದು ಕೂಡ ಸೇರ್ಪಡೆಯಾಗಿದೆ. ಇದು ಸಿಂಧು ಅವರ ವೃತ್ತಿಜೀವನದ 18ನೇ ಪ್ರಶಸ್ತಿಯಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!