ಮಣಿಪಾಲ: ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಶ್ವರನಗರದಲ್ಲಿ ನಡೆದಿದೆ.
ಸುಮತಿ (72) ಆತ್ಮಹತ್ಯೆ ಮಾಡಿಕೊಂಡವರು. ಇವರು ಅನೇಕ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು,ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು.
2021 ನೇ ಮಾರ್ಚ್ ತಿಂಗಳಿನಲ್ಲಿ ಮೃತ ಸುಮತಿಯವರ ಗಂಡ ಅನಾರೋಗ್ಯದಿಂದ ಮೃತಪಟ್ಟಿದ್ದು, ಆ ಬಳಿಕ ಮೃತ ಸುಮತಿ ಯವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಉಲ್ಬಣಗೊಂಡಿದೆ ಎನ್ನಲಾಗಿದೆ.
Advertisement. Scroll to continue reading.

ಚಿಕಿತ್ಸೆ ಪಡೆದರೂ ಮಾನಸಿಕ ಖಿನ್ನತೆ ಸಮಸ್ಯೆ ಗುಣಮುಖವಾಗದೆ ತೀವ್ರಗೊಂಡಿದ್ದು ಅವರು ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ಮನೆಯ ಪಕ್ಕದಲ್ಲಿರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































