ಮುಂಬೈ : ಬಾಲಿವುಡ್ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಸೋಮವಾರ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕರುಳಿನ ಸೋಂಕಿನಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ನಿಧನ ಇಂದು ರಾತ್ರಿ 7.45ಕ್ಕೆ ನಿಧನರಾಗಿದ್ದಾರೆ.
ಭೂಪಿಂದರ್ ಅವರ ಪತ್ನಿ ಮಿಥಾಲಿ ಸಿಂಗ್ ಅವರು ಅವರ ಸಾವಿನ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಖಚಿತಪಡಿಸಿದ್ದಾರೆ.

ದೋ ದೀವಾನೆ ಶೆಹರ್ ಮೇ, ಹೊಕೆ ಮಜ್ಬೂರ್ ಮುಜೆ ಉಸ್ನೆ ಬುಲಾಯಾ ಹೋಗಾ, ಆನೇ ಸೆ ಉಸ್ಕೆ ಆಯೆ ಬಹಾರ್, ದುನಿಯಾ ಚುತೆ ಯಾರ್ ನಾ ಚುತೆ, ಕಿಸಿ ನಜರ್ ಕೋ ತೇರಾ ಇಂಟೆಜಾರ್ ಆಜ್ ಭೀ ಹೈ ಮುಂತಾದ ಹಾಡುಗಳಿಗೆ ಭೂಪಿಂದರ್ ಹೆಸರುವಾಸಿಯಾಗಿದ್ದಾರೆ. ಅವರು ಬೀಟಿ ನಾ ಬೀಟೈ ರೈನಾ, ದಿಲ್ ಧೂಂಡ್ತಾ ಹೈ, ನಾಮ್ ಗಮ್ ಜಾಯೇಗಾ, ಏಕ್ ಅಕೇಲಾ ಇಸ್ ಶಹೇರ್ ಮೇ, ಹುಜೂರ್ ಇಸ್ ಕದರ್ ಭಿ ನಾ ಇತ್ರಾ ಕೆ ಚಾಲಿಯೆ ಹಾಡಿದರು.
ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮ್ಜೋಶಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಭೂಪಿಂದರ್ ಜೀ ಅವರು ಹತ್ತು ದಿನಗಳ ಹಿಂದೆ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಂಕು ತಗುಲಿತ್ತು. ಅವನಿಗೆ ಕರುಳಿನ ಕಾಯಿಲೆ ಇದೆ ಎಂದು ನಮಗೆ ಬಲವಾದ ಅನುಮಾನವಿತ್ತು. ಈ ಕುರಿತು ಪರೀಕ್ಷೆ ನಡೆಸಿತ್ತಿದ್ದಾಗ ಅವರಿಗೆ ಕೋವಿಡ್ -19 ಸೋಂಕು ತಗುಲಿತು. ಸೋಮವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟಿತು. ಹೀಗಾಗಿ ನಾವು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಬೇಕಾಯಿತು. ಅವರು ಹೃದಯ ಸ್ತಂಭನಕ್ಕೊಳಗಾಗಿ ಸಂಜೆ 7:45 ಕ್ಕೆ ನಿಧನರಾದರು ಎಂದು ಹೇಳಿದ್ದಾರೆ.
ಭೂಪಿಂದರ್ ಸಿಂಗ್ ಅವರ ನಿಧನಕ್ಕೆ ಬಾಲಿವುಡ್ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
ಸೂಪರ್ ಹಿಟ್ ಹಾಡುಗಳ ಸರದಾರ :

ಭೂಪಿಂದರ್ ಅವರು ಹುಟ್ಟಿದ್ದು ಪಂಜಾಬ್ ನ ಅಮೃತಸರದಲ್ಲಿ. ಅವರು ತಂದೆಯಿಂದ ಸಂಗೀತ ಕಲಿತರು. ಆಲ್ ಇಂಡಿಯಾ ರೇಡಿಯೋ ಮೂಲಕ ತಮ್ಮ ವೃತ್ತಿ ಜೀವನವನ್ನು ಭೂಪಿಂದರ್ ಆರಂಭಿಸಿದರು. 1962ರಲ್ಲಿ ಸಂಗೀತ ಸಂಯೋಜಕ ಮದನ್ ಮೋಹನ್ ಅವರು ಪಾರ್ಟಿ ಒಂದಕ್ಕೆ ತೆರಳಿದ್ದರು. ಈ ಪಾರ್ಟಿಯಲ್ಲಿ ಭೂಪಿಂದರ್ ಗಿಟಾರ್ ಬಾರಿಸುತ್ತಿದ್ದರು. ಅದನ್ನು ಕೇಳಿ ಅವರಿಗೆ ಮುಂಬೈಗೆ ಬರುವಂತೆ ಹೇಳಿದ ಅವರು, ‘ಹೋಕೆ ಮಜ್ಬೂರ್..’ ಹಾಡನ್ನು ಹಾಡುವಂತೆ ಭೂಪಿಂದರ್ ಗೆ ಆಫರ್ ನೀಡಿದರು.
‘ನಾಮ್ ಗಮ್ ಜಾಯೆಗಾ..’, ‘ಹೋತಾ ಪೆ ಐಸಿ ಬಾತ್..’, ‘ಕಭಿ ಕಿಸಿ ಕೋ ಮುಕಮ್ಮಲ್ ಜಹಾ ನಹಿ ಮಿಲ್ತಾ..’ ಮೊದಲಾದ ಸೂಪರ್ ಹಿಟ್ ಗೀತೆಗಳು ಭೂಪಿಂದರ್ ಸಿಂಗ್ ಕಂಠದಿಂದ ಮೂಡಿ ಬಂದಿವೆ.


































