ಕೇರಳ : ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಇದು ದೇಶದಲ್ಲೇ ಮೂರನೇ ಪ್ರಕರಣವಾಗಿದೆ. ಆಘಾತಕಾರಿ ಅಂಶ ಎಂದರೆ ಈ ಹೊಸ ಸೋಂಕಿನ ಮೂರು ಪ್ರಕರಣಗಳೂ ಕೂಡ ಕೇರಳದಲ್ಲಿ ವರದಿಯಾಗಿವೆ.
ಮಲಪ್ಪುರಂದ ಮೂಲದ 35 ವರ್ಷದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಜುಲೈ 6 ರಂದು ಯುಎಇಯಿಂದ ಅವರು ವಾಪಸ್ ಆಗಿದ್ದರು. 13 ರಂದು ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. 15 ರಂದು ದೇಹದಲ್ಲಿ ಚರ್ಮದ ಮಚ್ಚೆಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಹೀಗಾಗಿ ಮಂಕಿಪಾಕ್ಸ್ ಸೋಂಕಿನ ಅನುಮಾನದ ಮೇರೆಗೆ ವೈದಕೀಯ ಮಾದರಿಗಳನ್ನು ಪುಣೆ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
Advertisement. Scroll to continue reading.

ಸದ್ಯ ಈ ರೋಗಿಯು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಯುಎಇಯಿಂದ ಮರಳಿದ ಕೇರಳದ ಇಬ್ಬರಿಗೂ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು.