ಕ್ರೀಡೆ : ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕನ್ನು ಎದುರಿಸಬೇಕಾಗಿದೆ. ತಂಡದ ಆಟಗಾರ್ತಿ ನವಜೋತ್ ಕೌರ್ ಸೋಂಕಿಗೆ ಒಳಗಾಗಿದ್ದಾರೆ.
27 ವರ್ಷದ ಈ ಆಟಗಾರ್ತಿ ಕಳೆದ ಎರಡು ದಿನಗಳಿಂದ ಐಸೋಲೇಷನ್ನಲ್ಲಿದ್ದರು ಎಂದು ತಿಳಿದು ಬಂದಿದೆ.
ಜುಲೈ 30 ಶನಿವಾರದಂದು ನಡೆದ ಕೊರೊನಾ ಪರೀಕ್ಷೆಯಲ್ಲಿ ತಂಡದ ಅನುಭವಿ ಆಟಗಾರ್ತಿ ನವಜೋತ್ ಪಾಸಿಟಿವ್ ಎಂದು ಕಂಡುಬಂದಿದ್ದು, ಈ ಕಾರಣದಿಂದಾಗಿ ಅವರು ಪಂದ್ಯಗಳಿಂದ ಹೊರಗುಳಿದಿದ್ದಾರೆ. ನವಜೋತ್ಗೆ ಸೋಂಕು ತಗುಲಿರುವುದರಿಂದ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದ್ದು, ಭಾರತ ತಂಡ ಶನಿವಾರ ರಾತ್ರಿಯೇ ಗ್ರೂಪ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಬೇಕಾಗಿದೆ.
Advertisement. Scroll to continue reading.

ನವಜೋತ್ ಬದಲಿಗೆ ಸೋನಿಕಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ನವಜೋತ್ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ವಿಜೇತ ತಂಡದ ಸದಸ್ಯರಾಗಿದ್ದು, 2014ರಲ್ಲಿ ಇಂಚಿಯಾನ್ನಿಂದ ಕಂಚಿನ ಪದಕ ಗೆದ್ದಿದ್ದಾರೆ.
Advertisement. Scroll to continue reading.
