ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರಕ್ಷಕ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಂದಾಡಿ ವಾರಂಬಳ್ಳಿ ಚಾಂತಾರು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಶನಿವಾರ ಹಂದಾಡಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರುಗಿತು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಸಿವಿಲ್ ನ್ಯಾಯಾಧಿಶ ನಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಅವರು ಮಾತನಾಡಿ, ತಾಯಂದಿರು ಮಕ್ಕಳಿಗೆ ಮನೆಯಲ್ಲಿ ತಿಳಿಸಬೇಕು. ಹದಿ ಹರೆಯದ ಪ್ರಾಯದವರನ್ನೇ ಕಳ್ಳತನ ಮಾಡುವ ವಿದ್ಯಮಾನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರು ಅರಿವು ಮೂಡಿಸಿದಲ್ಲಿ ಮಾನವ ಕಳ್ಳ ಸಾಗಾಟವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ಮಾನವ ಕಳ್ಳ ಸಾಗಾಟದಿಂದ ಮಕ್ಕಳನ್ನು ದೇಶದ್ರೋಹಿ ಚಟುವಟಿಕೆ ಸೇರಿದಂತೆ ವೇಶ್ಯಾವಾಟಿಕೆ, ಭಿಕ್ಷಾಟನೆಗೆ ಬಳಸಿಕೊಳ್ಳುವ ವಿದ್ಯುಮಾನ ಇದ್ದು ಆ ಕುರಿತು ಜಾಗೃತಿ ಅಭಿಯಾನ ಎಲ್ಲಾ ಭಾಗದಲ್ಲಿ ನಡೆಯಬೇಕು ಎಂದರು.

ಬ್ರಹ್ಮಾವರ ಪೊಲೀಸ್ ಅಪರಾಧ ವಿಭಾಗದ ಮುಕ್ತ ಬಾಯಿ ಮಾತನಾಡಿ, ಪ್ರತೀ ಪೋಷಕರು ಎಷ್ಟೇ ಉದ್ಯೋಗ ವ್ಯವಹಾರ ಇದ್ದರೂ ತಮ್ಮ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಯಾದರೂ ಅವರೊಂದಿಗೆ ಬೆರೆತು ಅವರಿಗೆ ಪ್ರತೀ ನೀಡಿ ಇಲ್ಲವಾದಲ್ಲಿ ಅವರನ್ನು ನಾನಾ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಪುಟಾರ್ಡೊ, ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕಿ ವೀಣಾ ವಿವೇಕಾನಂದ, ಕುಮಾರ್ ನಾಯಕ್, ಗ್ರಾಮ ಪಂಚಾಯತಿಯ ಬೇಬಿ ಪೂಜಾರ್ತಿ, ಶೋಭಾ ಪೂಜಾರ್ತಿ, ನಾಗವೇಣಿ ಪಂಡರಿನಾಥ ಉಪಸ್ಥಿತರಿದ್ದರು.





































