ಕಾಮನ್‌ವೆಲ್ತ್ ಗೇಮ್ಸ್ 2022: ಭಾರತದ ವೇಟ್‌ಲಿಫ್ಟರ್ ಗುರ್ದೀಪ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
26 ವರ್ಷದ ಸಿಂಗ್ ಅವರಿಗೆ ಚೊಚ್ಚಲ ಕಾಮನ್‌ವೆಲ್ತ್ ಕ್ರೋಡಾಕೂಟ. ಒಟ್ಟಾರೆಯಾಗಿ 390 ಕೆಜಿ (167 ಕೆಜಿ + 223 ಕೆಜಿ) ಎತ್ತುವ ಮೂಲಕ ಈ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
405 ಕೆಜಿ (173 ಕೆಜಿ + 232 ಕೆಜಿ) ಎತ್ತುವ ಮೂಲಕ ಪಾಕಿಸ್ತಾನದ ಮುಹಮ್ಮದ್ ನೂಹ್ ಬಟ್ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
Advertisement. Scroll to continue reading.
ನ್ಯೂಜಿಲೆಂಡ್‌ನ ಡೇವಿಡ್ ಆಂಡ್ರ್ಯೂ ಲಿಟಿ 394 ಕೆಜಿ (170 ಕೆಜಿ + 224 ಕೆಜಿ) ಎತ್ತಿ ಬೆಳ್ಳಿ ಗೆದ್ದರು.