Connect with us

Hi, what are you looking for?

Diksoochi News

Uncategorized

ಕಾಮನ್ವೆಲ್ತ್ ಗೇಮ್ಸ್ 2022 : ಕಂಚು ಗೆದ್ದ ಮಹಿಳಾ ಹಾಕಿ ತಂಡ

2

ಕಾಮನ್ವೆಲ್ತ್ ಗೇಮ್ಸ್ 2022 : ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ ಎಸ್‌ಒನಲ್ಲಿ 2-1 ಗೋಲುಗಳ ಅಂತರದಿಂದ ಗೆದ್ದಿದೆ.

ಪಂದ್ಯಾವಳಿಯಲ್ಲಿ ಮೂರನೇ ಸ್ಥಾನವನ್ನ ಪಡೆಯಲು ಭಾರತಕ್ಕೆ ಕಂಚಿನ ಪದಕದ ಪಂದ್ಯದಲ್ಲಿ ಯಾವುದೇ ಪೆನಾಲ್ಟಿ ಶೂಟೌಟ್ ಅಡ್ಡಿಯಾಗಲಿಲ್ಲ.

ಮೊದಲ ಕ್ವಾರ್ಟರ್‌ನಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟವಾಡುವ ಯತ್ನ ನಡೆಸಿದರೂ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಸಲೀಮಾ ತೇಟೆ ಗೋಲಿನ ಖಾತೆ ತೆರೆಯುವ ಮೂಲಕ 1-0 ಮುನ್ನಡೆ ತಂದುಕೊಟ್ಟರು.

Advertisement. Scroll to continue reading.

ಪಂದ್ಯದ ಕೊನೆಯ ನಿಮಿಷದವರೆಗೂ ಭಾರತ 1-0 ಮುನ್ನಡೆ ಕಾಯ್ದುಕೊಂಡಿತ್ತು. ಸಾಕಷ್ಟು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದರೂ ಕೂಡಾ ಭಾರತ ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಯಶಸ್ವಿಯಾಗಲಿಲ್ಲ.

ಕೊನೆಯ ನಿಮಿಷದ ಕೆಲವೇ ಸೆಕೆಂಡ್‌ಗಳು ಭಾಕಿ ಇದ್ದಾಗ ಅಂದರೆ 18 ಸೆಕೆಂಡ್ ಇದ್ದಾಗ ನ್ಯೂಜಿಲೆಂಡ್ ಗೋಲು ಬಾರಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು.

ಪಂದ್ಯವು 1-1ರ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಮೊದಲ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್ ಗೋಲು ಬಾರಿಸುವ ಮೂಲಕ 1-0 ಮುನ್ನಡೆ ಪಡೆಯಿತು. ಇದರ ಬೆನ್ನಲ್ಲೇ ಭಾರತ ಎರಡು ಸತತ ಗೋಲು ದಾಖಲಿಸಿತು. ಈ ಮೂಲಕ ಭಾರತ 2-1ರ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ಉತ್ತಮ ಗೋಲ್ ಕೀಪಿಂಗ್ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ನಾಯಕಿ ಸವಿತಾ ಪೂನಿಯ ಯಶಸ್ವಿಯಾದರು.
 

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!