ಮಲಪ್ಪುರಂ : ಪಿಎಸ್ಸಿ ಪರೀಕ್ಷೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಒಂದೇ ಬಾರಿ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪರೂಪದ ಘಟನೆ ನಡೆದಿದೆ. ಅರಿಕೋಡ್ ನಿವಾಸಿ ಬಿಂದು ಮತ್ತು ಅವರ ಪುತ್ರ ವಿವೇಕ್ ಈ ಅಪರೂಪದ ಸಾಧನೆ ಮಾಡಿದವರು. ನಿನ್ನೆ ಪ್ರಕಟವಾದ ಎಲ್ಜಿಎಸ್ ರ್ಯಾಂಕ್ ಪಟ್ಟಿಯಲ್ಲಿ ಮಲಪ್ಪುರಂ ಜಿಲ್ಲೆಯಿಂದ ಬಿಂದು 92ನೇ ರ್ಯಾಂಕ್ ಹಾಗೂ ಪುತ್ರ ವಿವೇಕ್ ಎಲ್ಡಿಸಿಯಿಂದ 38ನೇ ರ್ಯಾಂಕ್ ಗಳಿಸಿದ್ದಾರೆ. ಇಬ್ಬರೂ ಅರಿಕೋಡ್ ಪಿಎಸ್ಸಿ ಕೋಚಿಂಗ್ ಸೆಂಟರ್ನ ಅಭ್ಯರ್ಥಿಗಳು ಎಂಬುದು ವಿಶೇಷ