ಮಂಗಳೂರು : ಪ್ರವೀಣ್ ಹತ್ಯೆ ಮಾಡಿದ್ದು ಸ್ಥಳೀಯರೇ ಆಗಿದ್ದು, ಪರಾರಿಯಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಕೊಲೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿಗೆ ಹೋಗಿದ್ದರು. ಅಲ್ಲಿ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದರು. ಚಾರ್ಜ್ ಶೀಟ್ನಲ್ಲಿ ಎಲ್ಲವನ್ನೂ ಉಲ್ಲೇಖಿಸಲಾಗುವುದು. ಆರೋಪಿಗಳಿಗೆ ಸಹಕಾರ ನೀಡಿದವರ ಬಗ್ಗೆಯೂ ತನಿಖೆ ನಡೆಸಲಾಗುವುದು ಕ್ರಿಮಿನಲ್ ರೆಕಾರ್ಡ್ಸ್ ನೋಡಿ ವಿಚಾರಿಸಲಾಗುವುದು ಎಂದಿದ್ದಾರೆ.
ಯಾವ ಕಾರಣಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆಂದು ವಿಚಾರಣೆ ಮಾಡುತ್ತೇವೆ. ಬಂಧಿತ ಶಿಯಾಬುದ್ದಿ ಅಲಿಯಾಸ್ ಶಿಯಾಬ್ ಸುಳ್ಯ ನಿವಾಸಿಯಾಗಿದ್ದಾರೆ. ರಿಯಾಜ್, ಬಶೀರ್ ಮತ್ತಿಬ್ಬರು ಅರೋಪಿಗಳಾಗಿದ್ದು, ಅವರನ್ನೂ ವಿಚಾರಣೆ ನಡೆಸುತ್ತೆವೆ. ಆರೋಪಿಗಳು ಪ್ರವೀಣ್ ಹತ್ಯೆಗೆ 4 ಬೈಕ್, 1 ಕಾರು ಬಳಸಿದ್ದರು ಎಂದು ಅವರು ತಿಳಿಸಿದ್ದಾರೆ.

ಶಿಯಾಬುದ್ದೀನ್ ಸಂಸ್ಥೆಯೊಂದಕ್ಕೆ ಕೋಕೊ ಸಪ್ಲೈ ಮಾಡುತ್ತಿದ್ದ. ರಿಯಾಝ್ ಅಂಕತಡ್ಕ ಚಿಕನ್ ಸ್ಟಾಲ್ಗಳಿಗೆ ಕೋಳಿಗಳನ್ನು ಸಪ್ಲೈ ಮಾಡುವ ಕೆಲಸ ನಿರ್ವಹಿಸುತ್ತಿದ್ದ. ಬಶೀರ್ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

































