Connect with us

Hi, what are you looking for?

Diksoochi News

ಸಿನಿಮಾ

ಇಂದಿನಿಂದ ಶುರುವಾಗಲಿದೆ ವೂಟ್ ನಲ್ಲಿ ‘ಹರಿಕಥೆ ಅಲ್ಲ ಗಿರಿಕಥೆ’

1

ಚಂದನವನ : ಕಥೆ ಬರೆದು ನಿರ್ದೇಶಿಸಿದ್ದಾರೆ ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್. ಸಂಪೂರ್ಣ ನಗೆಪಾಟಲಿನಲ್ಲಿ ತೇಲುವ ಈ ಚಿತ್ರದಲ್ಲಿ ರಚನಾ ಇಂದರ್ ಹಾಗೂ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ

ದಿನದಿಂದ ದಿನಕ್ಕೆ ವೂಟ್ ಪ್ರಾದೇಶಿಕವಾಗಿ ಮತ್ತಷ್ಟು ವೈವಿದ್ಯಮಯವಾಗುತ್ತಿದೆ. ವಯಾಕಮ್18ನ ಪ್ರಸಿದ್ಧ ಡಿಜಿಟಲ್ ಪ್ಲಾಟ್ ಫಾರಂ ವೂಟ್ ಇದೀಗ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ‘ಹರಿಕಥೆ ಅಲ್ಲ ಗಿರಿಕಥೆ’ ವೂಟ್ ಸೆಲೆಕ್ಟ್‌ನಲ್ಲಿ ಶುಕ್ರವಾರ ಪ್ರಸಾರವಾಗಲಿದೆ. ಹೊಟ್ಟೆ ಹುಣ್ಣಾಗುವಷ್ಟು ಹಾಸ್ಯ ತುಂಬಿರುವ ಚಿತ್ರವೂ ಪ್ರೇಕ್ಷಕರನ್ನು ನಗಿಸಲು ಡಿಜಿಟಿಲ್ ಪ್ಲಾಟ್‌ಾರಂನಲ್ಲಿ ಆಗಸ್ಟ್ 12 ರಂದು ಮೂಡಿಬರಲಿದೆ.


ಯುವ ನಿರ್ದೇಶಕರಾದ ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್, ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದರೆ, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ ಇತರರು ತಾರಾಂಗಣದಲ್ಲಿದ್ದಾರೆ. ಮೂವರು ಗಿರಿಗಳ ನೆಲೆಗಟ್ಟಿನಲ್ಲಿ ಈ ಚಿತ್ರವನ್ನು ಹೆಣೆಯಲಾಗಿದೆ. ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ ಈ ಮೂವರು ಅಕಸ್ಮಿಕವಾಗಿ ಸೇರಿಕೊಳ್ಳುತ್ತಾರೆ. ಈ ಮೂವರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದೇ ಚಿತ್ರದ ಮೂಲ ತಿರುಳು. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದೇ ಸಿನಿಮಾದ ಮೂಲ ಉದ್ದೇವಾಗಿದೆ.

Advertisement. Scroll to continue reading.


ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನಾವಳಿ ಕೃಷ್ಣ ನಟನೆ ಗಮನಸೆಳೆಯುತ್ತದೆ. ಇಬ್ಬರ ನಡುವಿನ ಹಾಸ್ಯ ಸಂಭಾಷಣೆ,ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜತೆಗೆ ಸಾಕಷ್ಟು ಮನರಂಜನೆಯಾಗಿದೆ. ಈ ಮೂವರ ನಡುವಿನ ಹಾಸ್ಯ ಭರಿತ ಸಂಭಾಷಣೆಯನ್ನು ಆಗಸ್ಟ್ 12 ರಂದು ವೂಲ್‌ಸೆಲೆಕ್ಟ್‌ನಲ್ಲಿ ವೀಕ್ಷಿಸಿ.

‘ನಾನು ಮೊದಲಿಗೆ ಕಥೆ ಓದಿಗಾಗಲೇ ಬೌಲ್ಡ್ ಆದೆ. ಇದೊಂದು ಹಾಸ್ಯಭರಿತ ಒಟಿಟಿಯಲ್ಲಿ ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನನಗೆ ಸಿಕ್ಕಿದ್ದ ಪಾತ್ರ ತುಂಬಾ ಸವಾಲಿನಿಂದ ಕೂಡಿತ್ತು. ವೂಟ್‌ನಲ್ಲಿ ಚಿತ್ರ ವೀಕ್ಷಿಸಲು ಉತ್ಸುಕನಾಗಿದ್ದೇನೆ. ಅಲ್ಲದೆ, ಜನರ ಪ್ರತಿಕ್ರಿಯೆ ಯಾವ ರೀತಿ ಬರುತ್ತದೆ ನೋಡಬೇಕು. ಇದೊಂದು ವಿಶೇಷ ಜರ್ನಿ. ಇಂಥ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು’ ಎಂದು ನಟ ರಿಷಭ್ ಶೆಟ್ಟಿ ತಿಳಿಸಿದ್ದಾರೆ.

‘ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಹಾಗೂ ನನ್ನ ಪಾತ್ರ ಗಿರಿಜಾ ಮನಸಿಗೆ ತುಂಬಾ ಹತ್ತಿರವಾಗಿದೆ. ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಮಾಡಿದ್ದೆ. ಪ್ರತಿಯೊಂದು ಸಂಭಾಷಣೆ, ಸನ್ನಿವೇಶ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮನಡುವಿನ ಕೆಮಿಸ್ಟ್ರಿ ಆನ್‌ಸ್ಕ್ರೀನ್‌ನಲ್ಲಿ ತುಂಬಾ ಚೆನ್ನಾಗಿ ಬಂದಿದೆ. ವೂಟ್ ಸೆಲೆಕ್ಟ್‌ನಲ್ಲಿ ಚಿತ್ರ ನೋಡಲು ಉತ್ಸುಕನಾಗಿರುವೆ’ ಎಂದು ಚಿತ್ರದ ನಾಯಕಿ ರಚನಾ ಇಂದರ್ ಹೇಳಿಕೊಂಡಿದ್ದಾರೆ.
‘ಈ ಸಿನಿಮಾ ತುಂಬಾ ವಿಶೇಷದಿಂದ ಕೂಡಿದೆ. ಸಿನಿಮಾ ಚಿತ್ರಿಕರಣದ ವೇಳೆ ಉತ್ತಮ ಅನುಭವ ಉಂಟಾಯಿತು. ಸಿನಿಮಾ ವೀಕ್ಷಿಸುವಾಗಿ ಪ್ರತಿಯೊಂದು ಸೆಕೆಂಡ್ ಕೂಡ ನಗು ತರಿಸುತ್ತದೆ. ಒಂದು ಅದ್ಭುತ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ. ಇದೊಂದು ಅದ್ಭುತ ಜರ್ನಿಯಾಗಿತ್ತು. ಸೆಟ್ಸ್‌ನಲ್ಲಿ ಸಹ ಕಲಾವಿದರೊಂದಿಗೆ ಉತ್ತಮ ಸಮಯ ಕಳೆದ್ವಿ. ಇದೀಗ ವೂಟ್ ಸೆಲೆಕ್ಟ್ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇವೆ. ಶುಕ್ರವಾರ ವೂಟ್ ಸೆಲೆಕ್ಸ್ ನೋಡಲು ಉತ್ಸಾಹದಿಂದ ಕಾಯುತ್ತಿದ್ದು, ಪ್ರೇಕ್ಷಕರೂ ಕೂಡ ಎಂಜಾಯ್ ಮಾಡುವರ. ಮೂವರ ಜರ್ನಿ ಕುರಿತು ಚಿತ್ರಿಕರಿಸಿರುವ ಈ ಚಿತ್ರದ ವೈಯಕ್ತಿಕ ಬದುಕನ್ನು ಅನಾವರಣಗೊಳಿಸಿದೆ. ವೂಟ್ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಮನಮುಟ್ಟಲಿದೆ.

‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾವನ್ನು ಎಕ್ಸ್‌ಕ್ಲೂಸಿವ್ ಆಗಿ ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಿಸಿ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!