ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಚೇರ್ಕಾಡಿಯ 23 ವರ್ಷದ ಹರ್ಷೆಂದ್ರ ಈ ಹಿಂದೆ ಬ್ರಹ್ಮಾವರದಿಂದ ಜಮ್ಮು ಕಾಶ್ಮೀರಕ್ಕೆ 2,700 ಕಿಮಿ ಕಾಲು ನಡಿಗೆಯಿಂದ ಹೋಗಿ ತುಳುನಾಡ ಜಾನಪದ ಕಲೆ ಹುಲಿ ಕುಣಿತವನ್ನು ಮಾಡಿ ಬಂದವರು ಇಂದು ಬ್ರಹ್ಮಾವರದಿಂದ ಸಿಂಗಪೂರ್‌ಗೆ ಸೈಕಲಿನಲ್ಲಿ ಹೋಗುತ್ತಿದ್ದಾರೆ.
ಬ್ರಹ್ಮಾವರ ಬಂಟರ ಸಂಘದ ಬಳಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಸೈಕಲ್ ಯಾತ್ರೆಗೆ ಭಾರತ ರಾಷ್ಟ್ರ ಧ್ವಜ ನೀಡಿ ಚಾಲನೆ ನೀಡಿ ಶುಭ ಹಾರೈಸಿದರು.


ಕೇರಳ ತನಕ ರೈಲಿನಲ್ಲಿ ಹೋಗಿ ಬಳಿಕ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 1 ರಲ್ಲಿ ನೇಪಾಳ್ ಬಳಿಕ ಭೂತಾನ್, ಥೈಲೆಂಡ್, ಮಲೇಷ್ಯಾ ಮೂಲಕ ಸಿಂಗಾಪುರ ತಲುಪಲಿದ್ದಾರೆ.
11,000 ಕಿಮಿ ದೂರವನ್ನು ಒಟ್ಟು 6 ತಿಂಗಳಲ್ಲಿ ಸಂಚಾರ ಮಾಡಲಿದ್ದಾರೆ. ಪ್ರಪಂಚದ ಪರಿಸರ ಕಲುಷಿತ ನಿವಾರಣೆ ಮತ್ತು ತ್ಯಾಜ್ಯ ಮುಕ್ತ ಜನ ಜಾಗೃತಿ ಮೂಡಿಸಲು ಈ ಜಾಥಾ ವನ್ನು ಹಮ್ಮಿಕೊಂಡಿದ್ದೇನೆ ಎನ್ನುತ್ತಾರೆ ಸಿವಿಲ್ ಡಿಪ್ಲೋಮಾ ಇಂಜಿನಿಯರಿಂಗ್ ಪದವೀಧರ ಹರ್ಷೇಂದ್ರ.

ಚೇರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಭಟ್, ರೈಡರ್ ಅಶೋಶೀಯೇಶನ್‍ನ ಗಿರಿಧರ, ವೀಣಾ ನಾಯಕ್, ಕಮಲಾಕ್ಷ ಹೆಬ್ಬಾರ್, ಶಿಕ್ಷಕ ಶ್ರೀಕಾಂತ್ ಸಾಮಂತ್, ಈತನ ತಾಯಿ ಯಶೋಧ, ಈತನಿಗೆ ಸೈಕಲ್ ನೀಡಿದ ಅಲನ್ ವಾಝ್ ಮತ್ತು ಅನೇಕ ಹಿತೈಷಿಗಳು ಹಾಜರಿದ್ದು, ಶುಭ ಹಾರೈಸಿದರು.

































