ವರದಿ : ಬಿ.ಎಸ್.ಆಚಾರ್ಯ
ಬಾರ್ಕೂರು : ಬಳಕೆದಾರರು ತಮ್ಮ ಹಕ್ಕು ಗಳನ್ನು ಮತ್ತು ಹಿತಾಸಕ್ತಿ ಗಳನ್ನು ಅರಿತು ಜಾಗ್ರತರಾಗಿ ಎಂದು ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ಮತ್ತು ಬಳಕೆದಾರರ ವೇದಿಕೆ (ರಿ) ಉಡುಪಿ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿಭಾಗದ ಗ್ರಾಹಕ ಕ್ಲಬ್ ಉದ್ಘಾಟನೆಯನ್ನು ಬ್ರಹ್ಮಾವರ ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ನಾರಾಯಣನ್ ನೆರವೇರಿಸಿದರು.

ಕ್ಲಬ್ ನ ರಚನೆ ಜವಾಬ್ದಾರಿ ಹಾಗೂ ಗ್ರಾಹಕರ ಹಕ್ಕು, ಕರ್ತವ್ಯದ ಕುರಿತು ಪ್ರಮಾಣ ವಚನವನ್ನು ಬಳಕೆದಾರರ ವೇದಿಕೆಯ ಸರಕಾರಿ ಪದವಿ ಪೂರ್ವ ಕಾಲೇಜು ಬೇಲೂರಿನ ನಿವೃತ್ತ ಪ್ರಾಚಾರ್ಯವಾದಿರಾಜಾಚಾರ್ಯ ಬೋಧಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯಸ್ಥ ಪ್ರೀತಿ ರೇಖಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಐ.ಕೆ. ಜಯಚಂದ್ರ ರಾವ್, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಾರ್ಥನಾ, ಶಿಕ್ಷಕ ಪೂರ್ಣೇಶ್ ಕಾರ್ಯಕ್ರಮ ನಿರ್ವಹಿಸಿದರು.
Advertisement. Scroll to continue reading.



































