ಉಡುಪಿ : ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಮತ್ತು ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ ಅಂಬಲಪಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭ ದಲ್ಲಿ ಏರ್ಪಡಿಸಿದ್ದ ” ಉಡುಪಿ ಜಿಲ್ಲಾ ಮಟ್ಟದ ‘ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಗಾರರು’ ಪ್ರಬಂಧ ಸ್ಪರ್ಧೆ ಯಲ್ಲಿ ಪಟ್ಲ ಯು. ಎಸ್ ನಾಯಕ್ ಪ್ರೌಢ ಶಾಲೆ ಯ ಅನನ್ಯ ಮತ್ತು ಆದಿ ಉಡುಪಿ ಪ್ರಾಢಶಾಲೆ ಯ ಪ್ರಜ್ವಲ್ ಪ್ರಥಮ ಬಹುಮಾನ ( ರೂ 1500)ಪಡೆದಿದ್ದಾರೆ.
ಕಿದಿಯೂರು ವಿದ್ಯಾ ಸಮುದ್ರ ತೀರ್ಥ ಹೈ ಸ್ಕೂಲ್ ನ ಭಾಗ್ಯಶ್ರೀ, ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಆದರ್ಶ ಕೆ ಪೂಜಾರಿ ಮತ್ತು ಆದಿ ಉಡುಪಿ ಪ್ರೌಢ ಶಾಲೆಯ ಮಂಜುನಾಥ್ ದ್ವಿತೀಯ ಬಹುಮಾನ ( ರೂ 1000 ) ಪಡೆದಿದ್ದಾರೆ.
ಹಿರಿಯಡ್ಕ ಕೆಪಿಎಸ್‌ನ ಸೌಮ್ಯ, ಪಟ್ಲ ಯು.ಎಸ್ ನಾಯಕ್ ಪ್ರೌಢ ಶಾಲೆಯ ಅಶ್ವಿನಿ ತೃತೀಯ ಬಹುಮಾನ ಪಡೆದಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮ ಆಗಸ್ಟ್ 27 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಮುರಳೀಧರ ಉಪಾಧ್ಯ ಅವರು ತಿಳಿಸಿದ್ದಾರೆ.


































