Connect with us

Hi, what are you looking for?

Diksoochi News

ಕರಾವಳಿ

ಬಾರಕೂರು ಹಾಲು ಉತ್ಪಾದಕರ ಸಹಕಾರಿ ಸಂಘ : ಹೈನುಗಾರರ ಸಭೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಹೈಬ್ರಿಡ್ ಹಸುಗಳ ಆಹಾರ ಕ್ರಮ ವಿದೇಶಿ ಜನರ ಆಹಾರ ಕ್ರಮದಂತೆ ದೇಶಿ ತಳಿಗಳ ಹಸುಗಳಿಗಿಂತ ಭಿನ್ನವಾಗಿರುತ್ತದೆ ಎಂದು ದ.ಕ ಹಾಲು ಒಕ್ಕೂಟದ ಕೃಷಿ ಅಧಿಕಾರಿ ಶ್ರುತಿ ಹೇಳಿದರು.

ಶುಕ್ರವಾರ ಬಾರಕೂರು ರಶ್ಮಿ ಸಭಾ ಭವನದಲ್ಲಿ ಜರುಗಿದ ಬಾರಕೂರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಜರುಗಿದ ಹೈನುಗಾರರ ಸಭೆಯಲ್ಲಿ ಅವರು ಮಾತನಾಡಿ, ಹೈಬ್ರಿಡ್ ತಳಿಗಳ ಹಸುಗಳಿಗೆ ನಿಯಮಿತ ಕ್ರಮದಂತೆ ಆಹಾರ ನೀಡಿದಲ್ಲಿ ಹಾಲು ಹೆಚ್ಚಿಸಿಕೊಂಡು ಲಾಭ ಹೆಚ್ಚು ಪಡೆಯಬಹುದು ಎಂದರು.

Advertisement. Scroll to continue reading.

ಬಾರಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ, ವೈದ್ಯಾಧಿಕಾರಿ ನಿಜಾಮ್ ಪಠೇಲ್, ಬಾರಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷೆ ಹೇಮಲತಾ ಪ್ರಭಾಕರ ಪೂಜಾರಿ, ಕಾರ್ಯದರ್ಶಿ ವಸಂತ, ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು.

ಬಾರಕೂರು ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!