Connect with us

Hi, what are you looking for?

Diksoochi News

ರಾಷ್ಟ್ರೀಯ

9 ಸೆಕೆಂಡ್‌ನಲ್ಲಿ ನೋಯ್ಡಾದ ಅವಳಿ ಕಟ್ಟಡ ನೆಲಸಮ| Video

3

ನವದೆಹಲಿ : ನೋಯ್ಡಾದ ಸೆಕ್ಟರ್ 93 ಎ ನಲ್ಲಿರುವ ಸೂಪರ್ ಟೆಕ್ ಟ್ವಿನ್ ಟವರ್ ಭಾನುವಾರ ಮಧ್ಯಾಹ್ನ ನೆಲಸಮವಾಗಿದೆ. 100 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವನ್ನು ಜಲಪಾತದ ಇಂಪ್ಲೋಷನ್ ತಂತ್ರವನ್ನು ಬಳಸಿಕೊಂಡು ಜಸ್ಟ್ 9 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಯಿತು.

ಇದು ದೇಶದಲ್ಲಿ ಸ್ಫೋಟಿಸಲಾದ ಅತ್ಯಂತ ಎತ್ತರದ ಕಟ್ಟಡವಾಗಿದೆ.

ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದಂತ ನೋಯ್ಡಾದ ಟ್ವಿನ್ ಟವರ್ ಅನ್ನು, ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ನೆಲಸಮಗೊಳಿಸಲಾಗಿದೆ. ಇದು ಕುತುಬ್ ಮಿನಾರ್‌ಗಿಂತ ಲೂಎತ್ತರವಾದ ಅವಳಿ ಗೋಪುರವಾಗಿತ್ತು. ಈ ಕಟ್ಟಡವನ್ನು 3,700 ಕಿಲೋಗ್ರಾಂಗಳಷ್ಟು ಎಕ್ಸ್ಲೋಸಿವ್ಸ್ ಪ್ಲಾಂಟ್ ಬಳಸಿ ಇಂದು ನೆಲಸಮಗೊಳಿಸಲಾಯಿತು.

Advertisement. Scroll to continue reading.

ಧ್ವಂಸದ ಬಳಿಕ ಉಂಟಾದ ಧೂಳನ್ನು ನಿಯಂತ್ರಿಸಲು ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕರ್ ಗಳನ್ನು ಸ್ಥಾಪಿಸಲಾಯಿತು. ಧೂಳನ್ನು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯವನ್ನು ನಿಯಂತ್ರಿಸುವ ಪ್ರಕ್ರಿಯೆ ನಡೆದಿದೆ.

ಮೂರು ತಿಂಗಳಲ್ಲಿ ಕಟ್ಟಡ ಕೆಡವಬೇಕೆಂದು ಸುಪ್ರೀಂಕೋರ್ಟ್ ಆಗಸ್ಟ್ 31, 2021ರಲ್ಲಿ ತೀರ್ಪು ನೀಡಿತ್ತು. ತಾಂತ್ರಿಕ ಕಾರಣಗಳಿಂದಾಗಿ ಕಟ್ಟಡ ಕೆಡವುವ ಕಾರ್ಯಾಚರಣೆ 1 ವರ್ಷ ತಡವಾಗಿದೆ.

ಎರಡು ಟವರ್‌ಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಇರಿಸಿ,  20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿತ್ತು. “waterfall technique” ಎಂದು ಕರೆಯಲ್ಪಡುವ ತಂತ್ರದಿಂದ  ಕಟ್ಟಡಗಳು ಕುಸಿದು ನೇರವಾಗಿ ಕೆಳಗೆ ಬೀಳುವಂತೆ ಖಚಿತಪಡಿಸಿಕೊಳ್ಳಲು ಸ್ಫೋಟವನ್ನು ಯೋಜಿಸಲಾಗಿತ್ತು.

ಈ ಪ್ರದೇಶದಲ್ಲಿನ ಸುಮಾರು 7,000 ನಿವಾಸಿಗಳನ್ನು ಇಂದು ಬೆಳಿಗ್ಗೆ ಸ್ಥಳಾಂತರಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಅವುಗಳನ್ನು ಪುನಃಸ್ಥಾಪಿಸಲಾಗುತ್ತದೆ ಮತ್ತು ನಿವಾಸಿಗಳಿಗೆ ಸಂಜೆ 5.30 ರೊಳಗೆ ಹಿಂತಿರುಗಲು ಅನುಮತಿಸಲಾಗುತ್ತದೆ. ಧೂಳಿನಿಂದ ರಕ್ಷಣೆ ಪಡೆಯಲು  ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿಸಿದಾಗ ಮನೆಯೊಳಗೆ ಮಾಸ್ಕ್ ಧರಿಸಲು ಹೇಳಲಾಗಿದೆ ಎಂದು ತಿಳಿದು ಬಂದಿದೆ.

Advertisement. Scroll to continue reading.

9 ಸೆಕೆಂಡ್‌ನಲ್ಲಿ ನೋಯ್ಡಾದ ಅವಳಿ ಕಟ್ಟಡ ನೆಲಸಮ| Video

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!