Connect with us

Hi, what are you looking for?

Diksoochi News

ಕರಾವಳಿ

ರೋಟ್ರಾಕ್ಟ್ ಕ್ಲಬ್ ಕೋಟೇಶ್ವರ: ನೂತನ ಪದಾಧಿಕಾರಿಗಳ ಪದಗ್ರಹಣ

1

ಕೋಟ : ರೋಟ್ರಾಕ್ಟ್ ಕ್ಲಬ್ ಕೋಟೇಶ್ವರ ಇದರ 2022 – 23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಕೋಟೇಶ್ವರ ರೋಟರಿ ಭವನದಲ್ಲಿ ಜರುಗಿತು. ಕೋಟೇಶ್ವರ ರೋಟರಿ ಕ್ಲಬ್‌ನ ಅಧ್ಯಕ್ಷರ ಸುಧೀರ್ ಶೆಟ್ಟಿ ನೂಜಿ ಪದಪ್ರದಾನ ಮಾಡಿದರು.

ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ಭರತ್ ರಾಜ್ ಕೋಟೇಶ್ವರ ಆಯ್ಕೆಯಾದರು.

ಮುಖ್ಯ ಅತಿಥಿಗಳಾಗಿ ಪ್ರಭಾಕರ್ ಕುಂಬಾಶಿ ಅಸಿಸ್ಟೆಂಟ್ ಗವರ್ನರ್ ಹಾಗೂ ನಾಗರತ್ನ ಹೇರಳೆ ಟೀಚರ್ ಗೌರ್ಮೆಂಟ್ ಪ್ರೈಮರಿ ಸ್ಕೂಲ್ ಆಲೂರು, ಮಹಾಲಸಾ ಕಿಣಿ ಡಿ. ಆರ್ . ಆರ್, ರೋಟರಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ರೋಟರಾಕ್ಟ್ ಚೇರ್ಮನ್ ಅರುಣ್ ದೇವಾಡಿಗ, ರೋಟರಿ ಚಂದ್ರ ಪೂಜಾರಿ ರೋಟರಿ, ಗಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

Advertisement. Scroll to continue reading.


ಈ ಸಂದರ್ಭದಲ್ಲಿ ಎಸ್‌ಎಸ್‌‌ಎಲ್‌ಸಿಯಲ್ಲಿ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದ ನಿಶಾ ಜೋಗಿ ಕಾಳಾವರ ಅವರನ್ನು ಸನ್ಮಾನಿಸಲಾಯಿತು.

ಶ್ರೀಕಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು‌.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!