ಬೆಂಗಳೂರು: ಕಳೆದ ಒಂದು ದಶಕದಿಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಆಮೇಲೆ ಸ್ವಲ್ಪ ದಿನಗಳಿಂದ ಎಲ್ಲೂ ಸುದ್ದಿಯಿರಲಿಲ್ಲ. ಈ ನಡುವೆ ಅವರು ಕೆಲ ದಿನಗಳಿಂದ ಮತ್ತೆ ಸಿನಿಮಾ ರಂಗದ ಚುಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಅವರು ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರಾ!? ಎಂಬ ಪ್ರಶ್ನೆ ಕಾಡುತ್ತಿದೆ.
ರಮ್ಯಾ ಅಭಿಮಾನಿಗಳಂತೂ ರಮ್ಯಾ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂದು ಕಾಯುತ್ತಿದ್ದಾರೆ. ರಮ್ಯಾ ಮದುವೆಯಾಗುತ್ತಾರ? ಸಿನಿಮಾದಲ್ಲಿ ಅಭಿನಯಿಸುತ್ತಾರಾ!? ಎಂಬ ಪ್ರಶ್ನೆ ಅಂತೂ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
ಈ ನಡುವೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹರಿಬಿಟ್ಟಿರೋದು ಕುತೂಹಲ ಹುಟ್ಟು ಹಾಕಿದೆ.

ಈ ನಡುವೆ ಅವರು ರಾಜ್ ಬಿ ಶೆಟ್ಟಿ ರಮ್ಯ ಅವರ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಈ ನಡುವೆ ನಟಿ ರಮ್ಯಾ ಅವರು ಇಂದು ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿರುವ ಪೋಸ್ಟ್‌ವೊಂದು ಭಾರೀ ಕುತೂಹಲ ಹುಟ್ಟು ಹಾಕಿದೆ.
ಗಣೇಶ ಹಬ್ಬದಂದು ಅಂದರೆ ಆ.31ರ ಬೆಳಗ್ಗೆ ಸಿಹಿ ಸುದ್ದಿಯೊಂದನ್ನು ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ನಾಳೆ ಬೆಳಗ್ಗೆ 11:15 ರ ಸುಮಾರಿಗೆ ನಾನು ಕೆಲವು ಸಿಹಿ ಸುದ್ದಿಯನ್ನು ಶೇರ್ ಮಾಡುತ್ತೇನೆ. ಇದು ಅಧಿಕೃತ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದು ಸಹಜವಾಗೇ ಕುತೂಹಲ ಹೆಚ್ಚಿಸಿದೆ. ಸದ್ಯ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ.


































