ಹರಿಯಾಣ : ಗುರುಗ್ರಾಮ್ನ ಕಟ್ಟಡವೊಂದರ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ತನ್ನನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.
ಭದ್ರತಾ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಉದ್ಯಮಿ ವರುಣ್ ನಾಥ್ ವಿರುದ್ಧ ಗುರುಗ್ರಾಮ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಸದ್ಯ ವೈರಲ್ ಆಗುತ್ತಿದೆ. ಉದ್ಯಮಿ ವರುಣ್ ಲಿಫ್ಟ್ನಿಂದ ಹೊರಬಂದ ತಕ್ಷಣ ಕೋಪದಿಂದ ವರ್ತಿಸಿದ್ದಾನೆ. ಅಲ್ಲದೇ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಸಿಬ್ಬಂದಿ ಅಶೋಕ್ ಕುಮಾರ್ ಮತ್ತು ಲಿಫ್ಟ್ ಆಪರೇಟರ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಿಫ್ಟ್ನಲ್ಲಿ ಸಿಲುಕಿ ಪರದಾಟ; ತನ್ನನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ| Video Viral
#WATCH | Haryana: A resident of The Close North Apartments in Gurugram thrashed security guards after being briefly stuck in lift; FIR filed
I helped him get out of the lift within 3-4 minutes. As soon as he got out, he started beating me up: Guard Ashok Kumar
(CCTV visuals) pic.twitter.com/RDDwMQYdn8— ANI (@ANI) August 29, 2022


































