ಆ ಶಬ್ದಕ್ಕೆ ರಾತ್ರೋರಾತ್ರಿ ಬೆಚ್ಚಿ ಬಿದ್ದ ಶಿವಮೊಗ್ಗ ನಗರ!
Published
0
ಶಿವಮೊಗ್ಗ : ರಾತ್ರಿ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದಂತಾಗಿ ಶಿವಮೊಗ್ಗ ನಗರವೇ ಬೆಚ್ಚಿ ಬಿದ್ದಿದೆ. ರಾತ್ರಿ 10.30 ರ ಸುಮಾರಿಗೆ ಭೂಮಿ ಕಂಪಿಸಿದೆ. ಎಲ್ಲರೂ ಭೂಕಂಪವೆಂದುಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇಡೀ ಶಿವಮೊಗ್ಗ ಮಂದಿ ಭಯಭೀತರಾಗಿದ್ದಾರೆ. ಭದ್ರಾವತಿಯಲ್ಲೂ ಇಂತಹುದೇ ಅನುಭವವಾಗಿದೆ. ಅಷ್ಟೇ ಅಲ್ಲದೆ ಚಿಕ್ಕಮಗಳೂರಿನಲ್ಲೂ ಭೂಮಿ ಕಂಪಿಸಿದೆ ಎನ್ನಲಾಗಿದೆ.
ಆದರೆ, ಕ್ರಷರ್ ನಲ್ಲಾದ ಭಾರೀ ಸ್ಪೋಟದಿಂದ ಈ ಅವಘಡ ನಡೆದಿದೆ ಎಂಬುದು ಆಮೇಲೆ ತಿಳಿದಿದೆ. ಅತ್ತ ಭಾರೀ ಶಬ್ದಕ್ಕೆ ಜನರು ಗಾಬರಿಗೊಂಡಿದ್ದರೆ, ಇತ್ತ ಹುಣಸೋಡಿನ ರೈಲ್ವೆ ಕ್ರಷರ್ ನಲ್ಲಿ ಕಾರ್ಮಿಕರು ಹೆಣವಾಗಿದ್ದರು.