Connect with us

Hi, what are you looking for?

Diksoochi News

Uncategorized

ASIAN GAMES 2023 : ಪುರುಷರ ಸ್ಕ್ವಾಷ್‌‌ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನ ಗೆದ್ದ ಭಾರತ

1

ASIAN GAMES : ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಶನಿವಾರ ಭಾರತವು ಇನ್ನೊಂದು ಚಿನ್ನದ ಪದಕವನ್ನ ಗೆದ್ದಿದೆ.

ಪುರುಷರ ಸ್ಕ್ವಾಷ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಭಾರತ ಚಿನ್ನ ಗೆದ್ದು ಬೀಗಿದೆ.

 ಈ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ 10ನೇ ಚಿನ್ನದ ಪದಕ ಒಲಿದಿದೆ.

Advertisement. Scroll to continue reading.

ಭಾರತದ ಆಟಗಾರ 3-2 (11-7, 9-11, 8-11, 11-9, 12-10) ಸೆಟ್ ಗಳಿಂದ ಗೆದ್ದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಸೌರವ್ ಘೋಷಾಲ್, ಅಭಯ್ ಸಿಂಗ್ ಮತ್ತು ಮಹೇಶ್ ಮಂಗಾಂವ್ಕರ್ ಅವರನ್ನೊಳಗೊಂಡ ಭಾರತದ ಪುರುಷರ ಸ್ಕ್ವಾಷ್ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಸ್ಕ್ವಾಷ್ ಚಿನ್ನ ಗೆದ್ದುಕೊಟ್ಟಿದೆ. 

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!