ನವದೆಹಲಿ : ಭಾರತದ ಆದಿತ್ಯ ಎಲ್ 1 ಮಿಷನ್ 9.2 ಲಕ್ಷ ಕಿಲೋಮೀಟರ್ ಪ್ರಯಾಣಿಸುವ ಮೂಲಕ ಭೂಮಿಯ ಪ್ರಭಾವದ ವಲಯವನ್ನು ತೊರೆದಿದೆ ಎಂದು ಇಸ್ರೋ ತಿಳಿಸಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಮಾಹಿತಿ ನೀಡಿರುವ ಇಸ್ರೋ, “ಭಾರತದ ಸೂರ್ಯ ಆದಿತ್ಯ – ಎಲ್ 1 ಮಿಷನ್ 9.2 ಲಕ್ಷ ಕಿಲೋಮೀಟರ್ ಪ್ರಯಾಣಿಸುವ ಮೂಲಕ ಭೂಮಿಯ ಪ್ರಭಾವದ ವಲಯವನ್ನು ಯಶಸ್ವಿಯಾಗಿ ತೊರೆದಿದೆ.
ಇದು ಈಗ ಸೂರ್ಯ-ಭೂಮಿಯ ಲಾಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ಮಾರ್ಗವನ್ನು ನ್ಯಾವಿಗೇಟ್ ಮಾಡುತ್ತಿದೆ ಎಂದು ಹೇಳಿದೆ.

Aditya-L1 Mission:
🔸The spacecraft has travelled beyond a distance of 9.2 lakh kilometres from Earth, successfully escaping the sphere of Earth's influence. It is now navigating its path towards the Sun-Earth Lagrange Point 1 (L1).
🔸This is the second time in succession that…— ISRO (@isro) September 30, 2023
ಮಾರ್ಸ್ ಆರ್ಬಿಟರ್ ಮಿಷನ್ ನಂತರ ಭಾರತವು ಭೂಮಿಯ ಪ್ರಭಾವದ ವ್ಯಾಪ್ತಿಯಿಂದ ಹೊರಗೆ ಬಾಹ್ಯಾಕಾಶ ನೌಕೆಯನ್ನ ಕಳುಹಿಸುತ್ತಿರುವುದು ಇದು ಎರಡನೇ ಬಾರಿ ಎಂದು ಇಸ್ರೋ ಹೇಳಿದೆ.