ASIAN GAMES 2023 : ಹ್ಯಾಂಗ್ಝೌನಲ್ಲಿಇಂದು ನಡೆದ ಏಷ್ಯನ್ ಗೇಮ್ಸ್ 2023 ರ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ಬೆಳ್ಳಿ ಪದಕದೊಂದಿಗೆ ಇತಿಹಾಸ ಬರೆದಿದ್ದಾರೆ.
ಈ ಪದಕದೊಂದಿಗೆ ಏಷ್ಯನ್ ಗಾಲ್ಫ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅದಿತಿ ಅಶೋಕ್ 7-ಸ್ಟ್ರೋಕ್ ಮುನ್ನಡೆಯೊಂದಿಗೆ ಆಟವನ್ನು ಪ್ರಾರಂಭಿಸಿದರು. ಅವರಿಗೆ ಚಿನ್ನ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಕೊನೆಯ ಎರಡು ಮೂರು ಹೊಡೆತದಲ್ಲಿ ಹಿನ್ನಡೆ ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಥಾಯ್ಲೆಂಡ್ ನ ಅರ್ಪಿಚಯಾ ಯುಬೋಲ್ ಅವರು ಚಿನ್ನದ ಪದಕವನ್ನು ಗೆದ್ದರು.

ಟೋಕಿಯೊ ಒಲಿಂಪಿಕ್ಸ್ ನಲ್ಲಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದ ಅದಿತಿ ಅಶೋಕ್ ಇದೀಗ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
🇮🇳 Aditi Ashok creates history by becoming the first Indian woman to win a Golf medal in the Asian Games. 𝑮𝒐𝒍𝒇𝒊𝒏𝒈 𝒈𝒓𝒆𝒂𝒕𝒏𝒆𝒔𝒔 𝒂𝒄𝒉𝒊𝒆𝒗𝒆𝒅. 🏌️
➡️ Follow @sportwalkmedia for schedule, results, medal and record alerts.@19thAGofficial @Media_SAI @WeAreTeamIndia… pic.twitter.com/4WudvkuWA7— Team India at the Asian Games 🇮🇳 (@sportwalkmedia) October 1, 2023
