ASIAN GAMES 2023: ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಸ್ಟಾರ್ ಅಥ್ಲೀಟ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 8.19 ಮೀಟರ್ ದೂರ ಜಿಗಿದು ಪೋಡಿಯಂ ಫಿನಿಶ್ ಪಡೆದರು.
ಇನ್ನು ಪುರುಷರ 1500 ಮೀಟರ್ ಫೈನಲ್ ಸ್ಪರ್ಧೆಯಲ್ಲಿ ಅಜಯ್ ಕುಮಾರ್ ಸರೋಜ್ ಬೆಳ್ಳಿ ಪದಕ ಗೆದ್ದರೆ, ಜಿನ್ಸನ್ ಜಾನ್ಸನ್ ಕಂಚಿನ ಪದಕ ಗೆದ್ದಿದ್ದಾರೆ. ಇವರಿಬ್ಬರು ಕ್ರಮವಾಗಿ 3:38.94 ಮತ್ತು 3:39.74 ಸಮಯದೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನಗಳನ್ನ ಪಡೆದರು.
Advertisement. Scroll to continue reading.

ಪುರುಷರ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಾಬ್ಲೆ ಮತ್ತು ಪುರುಷರ ಶಾಟ್ ಪುಟ್’ನಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದಾರೆ.
ಮಹಿಳೆಯರ 1500 ಮೀಟರ್ ಓಟದಲ್ಲಿ ಹರ್ಮಿಲನ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ.
Advertisement. Scroll to continue reading.
