Connect with us

Hi, what are you looking for?

Diksoochi News

Uncategorized

ಪದ್ಮ ಪ್ರಶಸ್ತಿ ಪ್ರಕಟ; ಗಾಯಕ ಎಸ್. ಪಿ.ಬಿ, ಡಾ.ಬಿ.ಎಂ.ಹೆಗ್ಡೆ ಸೇರಿ ಏಳು ಮಂದಿಗೆ ಪದ್ಮವಿಭೂಷಣ

0

ನವದೆಹಲಿ: 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಏಳು ಮಂದಿಗೆ ಪದ್ಮ ವಿಭೂಷಣ ಘೋಷಿಸಲಾಗಿದ್ದು, ಜಪಾನ್ ದೇಶ ಮಾಜಿ ಪ್ರಧಾನಿ ಶಿಂಜೋ ಅಬೆ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(ಮರಣೋತ್ತರ),ಡಾ.ಬೆಳ್ಳೆ ಮೋನಪ್ಪ ಹೆಗ್ಡೆ(ವೈದ್ಯಕೀಯ) ಮರಳು ಶಿಲ್ಪಿ ಸುದರ್ಶನ್ ಸಾಹೋ, ವಾಸ್ತುಶಿಲ್ಪಿ ಬಿಬಿ ಲಾಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್ ಕಪನಿ (ಮರಣೋತ್ತರ), ಆಧಾತ್ಮ ಕ್ಷೇತ್ರದಲ್ಲಿ ಮೌಲಾನಾ ವಹಿದುದ್ದೀನ್ ಖಾನ್ ರಿಗೆ ಪ್ರಶಸ್ತಿ ಒಲಿದಿದೆ.

ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ, ತರುಣ್ ಗೊಗಾಯಿ(ಮರಣೋತ್ತರ), ಚಂದ್ರಶೇಖರ ಕಂಬಾರ, ಸುಮಿತ್ರಾ ಮಹಾಜನ್, ನೃಪೇಂದ್ರ ಮಿಶ್ರಾ, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ), ಕೇಶು ಭಾಯಿ ಪಟೇಲ್ (ಮರಣೋತ್ತರ), ಕಲ್ಬೆ ಸಾದಿಕ್ (ಮರಣೋತ್ತರ), ರಜನಿಕಾಂತ್ ದೇವಿದಾಸ್ ಶ್ರಫ್, ತರ್ಲೋಚನ್ ಸಿಂಗ್ ಈ ಹತ್ತು ಮಂದಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿದೆ.
102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದ್ದು, ಕರ್ನಾಟಕದ 5 ಮಂದಿಗೆ ಪ್ರಶಸ್ತಿಯ ಗರಿ ಒಲಿದಿದೆ.
ಪದ್ಮ ವಿಭೂಷಣ: ಡಾ. ಬಿ. ಎಂ ಹೆಗ್ಡೆ (ವೈದ್ಯಕೀಯ)
ಪದ್ಮ ಭೂಷಣ: ಡಾ. ಚಂದ್ರಶೇಖರ ಕಂಬಾರ (ಸಾಹಿತ್ಯ ಮತ್ತು ಶಿಕ್ಷಣ)
ಪದ್ಮಶ್ರೀ: ಮಾತಾ ಬಿ ಮಂಜಮ್ಮ ಜೋಗತಿ (ಕಲೆ)

Advertisement. Scroll to continue reading.

ಪದ್ಮಶ್ರೀ: ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ)

ಪದ್ಮಶ್ರೀ: ಕೆವೈ ವೆಂಕಟೇಶ್ (ಕ್ರೀಡೆ)

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!